Advertisement

ಅಯೋಧ್ಯೆ ಭೂ ದರ ತಿಂಗಳಲ್ಲೇ ಡಬಲ್‌

12:39 AM Sep 22, 2020 | Team Udayavani |

ಅಯೋಧ್ಯೆ: ಐತಿಹಾಸಿಕ ರಾಮಮಂದಿರಕ್ಕೆ ಭೂಮಿಪೂಜೆ ನಡೆದ ಒಂದೇ ತಿಂಗಳಲ್ಲಿ ಅಯೋಧ್ಯೆಯ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ!

Advertisement

ಹೌದು, ಸುಪ್ರೀಂ ಕೋರ್ಟ್‌ ತೀರ್ಪು ನೀಡುವ ಸಂದರ್ಭದಲ್ಲಿ ಅಯೋಧ್ಯೆ ಪಟ್ಟಣದಲ್ಲಿ ನಿವೇಶನಗಳು ಚದರ ಅಡಿಗೆ 900 ರೂ.ನಂತೆ ಮಾರಾಟಗೊಳ್ಳುತ್ತಿದ್ದವು. ಈಗ ಈ ದರ ದುಪ್ಪಟ್ಟಾಗಿದೆ. “ಪ್ರಸ್ತುತ ಪಟ್ಟಣದ ಹೃದಯ ಭಾಗದಲ್ಲಿ ನಿವೇಶನ ಮೌಲ್ಯ ಪ್ರತಿ ಚದರ ಅಡಿಗೆ 2000-3000 ಸಾವಿರ ರೂ. ನಡೆಯುತ್ತಿದೆ. ಅಯೋಧ್ಯೆ ಹೊರವಲಯದ ನಿವೇಶನಗಳ ದರ 1000- 1500 ರೂ.ಗೆ ಏರಿದೆ’ ಎಂದು ಆಸ್ತಿ ಖರೀದಿ ಸಲಹೆಗಾರ ರಿಶಿ ಟಂಡನ್‌ ತಿಳಿಸಿದ್ದಾರೆ.

“ಉದ್ಯಮಿಗಳು, ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳು ಆಸ್ತಿ ಖರೀದಿಗೆ ಪೈಪೋಟಿ ನಡೆಸುತ್ತಿದ್ದಾರೆ. ದೇಶದ ಇತರೆ ಭಾಗದ ಸಿರಿವಂತರೂ ಇಲ್ಲಿನ ಜಮೀನುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಧರ್ಮಶಾಲೆ, ಸಮುದಾಯ ಪಾಕಶಾಲೆಯಂಥ ಧಾರ್ಮಿಕ ಉದ್ದೇಶಗಳಿಗೆ ಕೆಲವರು ಭೂಮಿ ಖರೀದಿಸು ತ್ತಿದ್ದರೆ, ಮತ್ತೆ ಕೆಲವರು ಭವಿಷ್ಯದ ಹೂಡಿಕೆಯ ಉದ್ದೇಶ ಹೊಂದಿದ್ದಾರೆ. ಹಲವು ಆಸ್ತಿಗಳು ಮಾಲೀಕತ್ವ ವಿವಾದ ಹೊಂದಿವೆ. ಸರಯೂ ತೀರದ ಗದ್ದೆಗಳ ಮಾರಾಟದ ಮೇಲೆ ಹಸಿರು ನ್ಯಾಯಾಧಿಕರಣ ಕಟ್ಟುನಿಟ್ಟಿನ ನಿಗಾ ವಹಿಸಿದೆ.

ದಿಢೀರ್‌ ಏರಿದ್ದೇಕೆ?
ಅಯೋಧ್ಯೆಯನ್ನು ವಿಶ್ವದ ಧಾರ್ಮಿಕ ಕೇಂದ್ರವಾಗಿಸಲು ಪ್ರಧಾನಿ ಶಪಥ.
ಸಿಎಂ ಯೋಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಘೋಷಿಸಿದ್ದು.
3 ಸ್ಟಾರ್‌ ಹೋಟೆಲ್‌ಗ‌ಳ ನಿರ್ಮಾಣಕ್ಕೆ ಉದ್ಯಮಿಗಳು ಮುಗಿಬಿದ್ದಿರುವುದು.
ವಿವಿಧ ಧಾರ್ಮಿಕ ಯೋಜನೆಗಳಿಗೆ ಸರಕಾರ ಬೃಹತ್‌ ಪ್ರಮಾಣದಲ್ಲಿ ಭೂಮಿ ಖರೀದಿಸುತ್ತಿರುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next