Advertisement
ಹರಿದ್ವರ್ಣದಿಂದ ಕಂಗೊಳಿಸುವ ರಾಣಿಪುರಂ ಪ್ರವಾಸಿ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ದೂರವಾಣಿ ಸಂಪರ್ಕ ಕಡಿದಿದೆ. ಕಡಿದು ಹೋಗಿರುವ ದೂರವಾಣಿ ಸಂಪರ್ಕವನ್ನು ದುರಸ್ತಿ ಗೊಳಿಸಲು ಸಂಬಂಧಪಟ್ಟವರು ಮುಂದಾ ಗದಿರುವುದರಿಂದ ಜನರು ಆಕ್ರೋಶಿತ ರಾಗಿದ್ದಾರೆ. ಇಲಾಖೆ ಅಧಿಕಾರಿಗಳ ಅವಗಣನೆಯನ್ನು ಪ್ರತಿಭಟಿಸಿದ್ದಾರೆ.
Related Articles
ಕಾಸರಗೋಡು ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿರುವ ರಾಣಿಪುರಂ ಸಮುದ್ರ ಮಟ್ಟದಿಂದ 700 ಮೀ. ಎತ್ತರದಲ್ಲಿದೆ. ರಾಣಿಪುರಂ ಕೇರಳದ ಊಟಿ ಎಂದೂ ಜನಪ್ರಿಯವಾಗಿದೆ. ಮುಖ್ಯ ವಾಗಿ ರಾಣಿಪುರಂ ಪರಿಸರ ಪ್ರವಾಸೋ ದ್ಯಮಕ್ಕೆ ಹೆಸರುವಾಸಿ. ನಿತ್ಯ ಹರಿದ್ವರ್ಣ ಕಾಡುಗಳು, ಮನ್ಸೂನ್ ಕಾಡುಗಳನ್ನು ಹೊಂದಿರುವ ರಾಣಿಪುರಂ ಶೋಲಾ ಮರಗಳು, ಇನ್ನಿತರ ವಿಶೇಷ ಅರಣ್ಯ ಸಂಪತ್ತನ್ನು ಹೊಂದಿದೆ. ಈ ಗಿರಿಶಿಖರ ಹಲವಾರು ಪ್ರಾಣಿಪಕ್ಷಿ ಗಳಿಗೆ ವಾಸಸ್ಥಾನವಾಗಿದೆ. ಜಿಂಕೆ, ಆನೆಗಳು, ವಿವಿಧ ರೀತಿಯ ಮಂಗಗಳು, ಪಕ್ಷಿ ಪ್ರಭೇದಗಳು ಇಲ್ಲಿ ಕಾಣ ಸಿಗುತ್ತವೆ. ಕರ್ನಾಟಕದ ತಲಕಾವೇರಿ ಅಭಯಾ ರಣ್ಯದೊಂದಿಗೆ ರಾಣಿಪುರಂ ತನ್ನ ಗಡಿ ಯನ್ನು ವಿಲೀನಗೊಳಿಸುತ್ತದೆ. ಕೇರಳದ ಇತರ ಗಿರಿಧಾಮಗಳಂತೆ ರಾಣಿಪುರಂ ಅತ್ಯಂತ ಜನಪ್ರಿಯ ಚಾರಣ ಸ್ಥಳವಾಗಿದೆ. ಎತ್ತರದ ಟ್ರೆಕ್ಕಿಂಗ್ ಪಾಯಿಂಟ್‌ನ್ನು “ಮಣಿಮಾಲಾ’ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಹಸಿರ ಸೌಂದರ್ಯ, ಸ್ವತ್ಛವಾದ ತಂಪು ಗಾಳಿ ಚಾರಣದ ದಣಿವು ನಿವಾರಿಸು ವಂತೆ ಮಾಡುತ್ತದೆ. ಪ್ರಕೃತಿಯ ಮಡಿಲ ಸೌಂದರ್ಯದಲ್ಲಿ ಆಯಾಸ ಮರೆಯಾ ಗುತ್ತದೆ. ಚಾರಣ ಮಾಡುವ ವೇಳೆ ಅಪರೂಪದ ಔಷ ಧೀಯ ಸಸ್ಯಗಳನ್ನು ಕಾಣ ಬಹುದು. ವಿವಿಧ ರೀತಿಯ ಜೀವಿ ಗಳು, ಹಲವು ಪ್ರಭೇದಗಳ ಪಕ್ಷಿ ಗಳನ್ನೂ ಗುರುತಿಸ ಬಹುದು. ರಾಣಿ ಪುರಂ ಚಾರಣವು ರೋಮಾಂಚನಕಾರಿ ಅನುಭವವನ್ನೂ ನೀಡುತ್ತದೆ.
Advertisement
ಉತ್ತರ ಲಭಿಸುತ್ತಿಲ್ಲರಾಣಿಪುರಂ ಪ್ರದೇಶದಲ್ಲಿ ಪದೇ ಪದೇ ದೂರವಾಣಿ ಸಂಪರ್ಕ ಕಡಿಯುವುದರಿಂದ ತೀವ್ರ ಸಂಕಷ್ಟಕ್ಕೆ ಕಾರಣವಾಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಕರೆಸಲು ಸಾಧ್ಯವಾಗದ ದುಸ್ಥಿತಿ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ದೂರವಾಣಿ ಇಲಾಖೆಯನ್ನು ಸಂಪರ್ಕಿಸಿದಾಗ ಸಂಬಂಧಪಟ್ಟವರಿಂದ ತೃಪ್ತಿಕರವಾದ ಉತ್ತರ ಲಭಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.