ಬೆಂಗಳೂರು: ಮಹಿಳಾ ಕುಸ್ತಿ ತರಬೇತಿ ಅಕಾಡೆಮಿ ಆರಂಭಕ್ಕೆ ಬೆಂಗಳೂರಿನ ಹೊರವಲಯದಲ್ಲಿ ಎರಡು ಎಕರೆ ಜಾಗ ನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್ ತಿಳಿಸಿದ್ದಾರೆ.
ಶಾಸಕ ಡಾ.ಸುಧಾಕರ್ ಮತ್ತು ಅಕ್ಷರ ಯೋಗ ಸಂಸ್ಥೆ ಜಂಟಿಯಾಗಿ ಅರಮನೆ ಮೈದಾನದಲ್ಲಿ ಶನಿವಾರದಿಂದ ಆರಂಭವಾದ 2 ದಿನಗಳ ಯೋಗ ಮತ್ತು ಮಹಿಳೆಯರಿಗೆ ಆತ್ಮರಕ್ಷಣೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
“ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಜಯಗಳಿಸಿದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ರಾಷ್ಟ್ರದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಹೆಚ್ಚಿಸಿದ್ದಾರೆ. ಕುಸ್ತಿಯಲ್ಲಿ ಮಹಿಳೆರು ಭಾಗವಹಿಸಲು ಹೆಚ್ಚು ಉತ್ತೇಜಿಸುವ ನಿಟ್ಟಿನಲ್ಲಿ ಅಕಾಡೆಮಿ ಸ್ಥಾಪಿಸಲು ಬೆಂಗಳೂರಿನ ಹೊರವಲಯದಲ್ಲಿ ಎರಡು ಎಕರೆ ಜಾಗ ನೀಡಲಾಗುವುದು.
ಗೀತಾ ಮತ್ತು ಬಬಿತಾ ಅವರು ಅಕಾಡೆಮಿ ನಡೆಸಲು ಮುಂದಾದಲ್ಲಿ ಸ್ಥಳದ ಅವಕಾಶ ಮಾಡಿಕೊಡಲಾಗುವುದು,” ಎಂದರು. ಮಹಿಳೆರಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು. ಅವರೊಂದಿಗೆ ಅನುಚಿತವಾಗಿ ವರ್ತಿಸುವುದು ಅಕ್ಷಮ್ಯ ಅಪರಾಧ. ತಮ್ಮ ಮೇಲಾಗುವ ದೌರ್ಜನ್ಯಗಳನ್ನು ಮಹಿಳೆಯರು ಸಹಿಸಬಾರದು.
ಅನುಚಿತವಾಗಿ ವರ್ತಿಸುವವರ ವಿರುದ್ಧ ಹೋರಾಡಲು ಆತ್ಮ ರಕ್ಷಣೆಯ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ತರಬೇತಿಯ ಸಂಯೋಜಕರಾದ ಅಕ್ಷರ ಮಾತನಾಡಿ, “ಮಾ.8ರಂದು ವಿಶ್ವ ಮಹಿಳಾ ದಿನ ಪ್ರಯುಕ್ತ ಬೃಹತ್ ಮಟ್ಟದಲ್ಲಿ ಶಿಬಿರ ಆಯೋಔ ಜಿಸಲು ಚಿಂತನೆ ನಡೆಸಲಾಗಿದೆ,” ಎಂದರು.