ಪಾಂಡವಪುರ: ಕೋರ್ಟ್‌ನಲ್ಲಿ ಕೇಸಿದ್ದರೂ ಜಮೀನು ಅಳತೆ ಮಾಡಿದಲ್ಲದೆ, ಇದನ್ನು ಪ್ರಶ್ನಿಸಿದ ಮಹಿಳೆಗೆ ಹಾರೆಯಿಂದ ಹೊಡೆಯಿರಿ ಎಂದು ಹೇಳಿದ್ದಾರೆನ್ನಲಾದ ಅಧಿಕಾರಿಯನ್ನು ಮಹಿಳೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆಯಿತು.
ತಾಲೂಕಿನ ಬೇವಿನಕುಪ್ಪೆ ಗ್ರಾಮದ ಅನುಸೂಯ ಎಂಬ ಮಹಿಳೆ ತಾಲೂಕು ಸರ್ವೆಯರ್ ಭಾಸ್ಕರ್‌ಗೆ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೇವಿನಕುಪ್ಪೆ ಗ್ರಾಮದ ಕೃಷ್ಣೇಗೌಡ, ಪತ್ನಿ ಅನುಸೂಯಗೆ ಸೇರಿದ ಸರ್ವೆ ನಂ.43/1 ಜಮೀನಿನ ಪೋಡ್ ಅನ್ನು ಪಕ್ಕದ ಜಮೀನಿನವರು ಬದಲಾಯಿಸಿ, ಜಮೀನು ಅದಲು ಬದಲು ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣೇಗೌಡ, ಅನುಸೂಯ ಆರು ತಿಂಗಳ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಜಮೀನಿನ ವಿಚಾರ ಕೋರ್ಟ್‌ನಲ್ಲಿ ಇರುವಾಗ ಪಕ್ಕದ ಜಮೀನನ ಮಾಲಿಕರಾದ ಶಿವಲಿಂಗೇಗೌಡ, ರಾಮಕೃಷ್ಣ ಹಾಗೂ ಸಿದ್ದಪ್ಪ ಎಂಬುವರು ಜಮೀನು ಅಳತೆ ಮಾಡಿಸಲು ಎರಡು ಮೂರು ಬಾರಿ ಸರ್ವೆಯರ್ ಅನ್ನು ಸ್ಥಳಕ್ಕೆ ಕರೆಯಿಸಿದ್ದರು. ಆದರೆ, ಇದಕ್ಕೆ ಅನುಸೂಯ, ಕೃಷ್ಣೇಗೌಡ ವಿರೋಧಿಸಿದ್ದರಿಂದ ಅಳತೆ ಮಾಡದೇ ವಾಪಸಾಗಿದ್ದರು.
ನೋಟಿಸ್ ಸ್ವೀಕರಿಸಿಲ್ಲ
Related Articles
ಹೀಗಿದ್ದರೂ, ಕಳೆದ ಗುರುವಾರ ಸಂಜೆ ಅಳತೆ ಮಾಡಲು ಅನುಸೂಯಗೆ ನೋಟಿಸ್ ನೀಡಿದ್ದಾರೆ. ಆದರೆ, ಜಮೀನನ ಪ್ರಕರಣ ಕೋರ್ಟ್‌ನಲ್ಲಿದೆ. ಅಲ್ಲಿಯವರೆಗೆ ಅಳತೆ ಮಾಡಬೇಡಿ ಎಂದು ಅನುಸೂಯ ನೋಟಿಸ್ ಸ್ವೀಕರಿಸಿಲ್ಲ. ಹೀಗಿದ್ದರೂ, ತಾಲೂಕು ಸರ್ವೆಯರ್ ಭಾಸ್ಕರ್ ಶುಕ್ರವಾರ ಜಮೀನಿನ ಬಳಿ ಆಗಮಿಸಿ ಅಳತೆ ಮಾಡಿದ್ದಾರೆ. ಅಲ್ಲದೆ, ಅಳತೆಗೆ ವಿರೋಧಿಸುತ್ತಿದ್ದ ಮಹಿಳೆ ಅನುಸೂಯಗೆ ಹಾರೆಯಿಂದ ಹೊಡೆಯಿರಿ ಎಂದು ಪಕ್ಕದ ಜಮೀನಿನವರಿಗೆ ಹೇಳಿ, ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಐಷಾರಾಮಿ ಜೀವನಕ್ಕಾಗಿ ಮನೆಗಳ್ಳತನ : ಇಬ್ಬರ ಬಂಧನ
ಕಚೇರಿಗೆ ಬರುತ್ತಿದ್ದಂತೆ ತರಾಟೆ
ಇದರಿಂದ ರೊಚ್ಚಿಗೆದ್ದ ಮಹಿಳೆ ಅನುಸೂಯ, ಪಾಂಡವಪುರ ತಾಲೂಕು ಕಚೇರಿ ಬಳಿಗೆ ಶುಕ್ರವಾರ ಆಗಮಿಸಿ ಸರ್ವೆಯರ್ ಭಾಸ್ಕರ್ ಬರುತ್ತಿದ್ದಂತೆಯೇ ಸಾರ್ವ ಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನೀನೊಬ್ಬ ಸರ್ಕಾರಿ ಅಧಿಕಾರಿಯಾಗಿ, ವಿರೋಧ ನಡುವೆಯೂ ಜಮೀನು ಅಳತೆ ಮಾಡಿದಲ್ಲದೆ, ಕೊಲೆ ಮಾಡುವಂತೆ ಪ್ರಚೋದನೆ ನೀಡುತ್ತಿದ್ದೀಯ, ನೀನು ಅವರಿಂದ ಎಷ್ಟು ಲಂಚ ಪಡೆದಿದ್ದೀಯ ಎಂದು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆ ಸಂಬಂಧ ಕ್ರಮಕೈಗೊಳ್ಳಿ
ಬಳಿಕ ತಹಶೀಲ್ದಾರ್ ನಯನ ಆಗಮಿಸಿ, ಇಬ್ಬರನ್ನು ಸಮಾಧಾನಪಡಿಸಿ ಘಟನೆಗೆ ಸಂಬಂಧಿಸಿದಂತೆ ಕ್ರಮತೆಗೆದುಕೊಳ್ಳಲಾಗು ವುದು ಎಂದು ತಿಳಿಸಿ ಮಹಿಳೆಗೆ ಸಾಂತ್ವನ ಹೇಳಿ ವಾಪಸ್ ಕಳುಹಿಸಿದ್ದಾರೆ. ಇತ್ತ ಸರ್ವೆಯರ್ ಭಾಸ್ಕರ್ ಅವರು ಜಮೀನು ಅಳತೆ ಮಾಡಿ ಕಲ್ಲು ನೆಟ್ಟು ವಾಪಸಾಗುತ್ತಿದ್ದಂತೆಯೇ ಪ್ರಕರಣ ಕೋರ್ಟ್‌ನಲ್ಲಿದ್ದರೂ ಪಕ್ಕದ ಜಮೀನಿನ ಶಿವಲಿಂಗೇಗೌಡ, ರಾಮಕೃಷ್ಣ ಹಾಗೂ ಸಿದ್ದಪ್ಪ ಅವರು ಕಬ್ಬಿನ ಬೆಳೆಯನ್ನು ಉಳಿಮೆ ಮಾಡಿ ನಾಶಪಡಿಸಿದ್ದಾರೆ ಎಂದು ಅನುಸೂಯ ಅವರ ಪುತ್ರ ಚಂದನ್ ಆಕ್ರೋಶ ಹೊರಹಾಕಿದ್ದಾರೆ.