ತಿಪಟೂರು: ರೈತರ ಭೂಮಿಗೆ ಯೋಗ್ಯ ಬೆಲೆ ಸಿಗುವವರೆಗೂ ಹಾಗೂ ರೈತರ ಅನುಮತಿ ಇಲ್ಲದೆ ಜಮೀನುಗಳಲ್ಲಿ ರಸ್ತೆ ಕಾಮಗಾರಿ ಪ್ರಾರಂಭ ಮಾಡಲು ಬಿಡುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ 206ರ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ರೈತ ಕಾರ್ಮಿಕ ಸಂಘಟನೆಗಳ ಪದಾಧಿ ಕಾರಿಗಳು ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರದ ರೈತಭವನದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ರೈತ ಕಾರ್ಮಿಕ ಸಂಘಟನೆಯಿಂದ ನಡೆದ ಸುದ್ದಿ ಗೋಷ್ಠಿಯಲ್ಲಿ ಆರ್‌ಕೆಎಸ್ ಸಂಚಾಲಕ ಎನ್.ಎಸ್.ಸ್ವಾಮಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ರೈತರ ಜಮೀನುಗಳಿಗೆ ಸರಿಯಾದ ಪರಿಹಾರ ಹಣ ನೀಡದಿದ್ದ ಕಾರಣ ಉಪವಿಭಾಗಾಧಿಕಾರಿ ಕಚೇರಿಯ ಎದುರು ನಿರಂತರ ಪ್ರತಿಭಟನೆ ಹಮ್ಮಿ ಕೊಳ್ಳಲಾಗಿತ್ತು.
ಆದರೆ, ಸಂಬಂಧಿಸಿದ ಪ್ರಾದೇಶಿಕ ಅಧಿಕಾರಿ, ಜಿಲ್ಲಾಧಿಕಾರಿ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿಗಳೊಂದಿಗೆ ರೈತರ ಸಮ್ಮುಖ ದಲ್ಲಿ ಚರ್ಚಿಸಿ ನ್ಯಾಯ ಒದಗಿಸಲಾಗುತ್ತದೆ ಎಂದು ತಿಳಿಸಿದ್ದರಿಂದ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿತ್ತು. ಇದರ ವಿಚಾರವಾಗಿ ತಿಪಟೂರು ಡಿವೈಎಸ್‌ಪಿ ಕಲ್ಯಾಣ್‌ಕುಮಾರ್ ನಮ್ಮೊಂದಿಗೆ ಮಾತನಾಡಿ ಜ.31ರ ನಂತರ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇಲ್ಲಿಗೆ ಬಂದು ರೈತ ರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳ ಲಿದ್ದಾರೆ ಎಂಬ ಭರವಸೆ ನೀಡಿದ್ದು, ರೈತರೆಲ್ಲರೂ ಚರ್ಚಿಸಿ ತಾಳ್ಮೆಯಿಂದ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಉಗ್ರ ಹೋರಾಟ: ಒಂದು ವೇಳೆ ಸಭೆ ವಿಫಲ ವಾದರೆ ಉಗ್ರ ಹೋರಾಟ ಮಾಡಲಾಗುತ್ತದೆ. ಗುಬ್ಬಿ ತಾಲೂಕಿನ ರಾಯಬಾಗದಲ್ಲಿ ನೋಟಿಸ್ ನೀಡದೆ ರೈತರ ಜಮೀನುಗಳಲ್ಲಿ ಕಾಮಗಾರಿ ಪ್ರಾರಂಭಿಸ ಲಾಗಿದೆ. ರೈತರಿಗೆ ಬರಬೇಕಾದ ಪರಿಹಾರದ ಹಣ ಕೈಸೇರುವವರೆಗೂ ಕಾಮಗಾರಿ ನಡೆಯಲು ಬಿಡು ವುದಿಲ್ಲ. ಅಲ್ಲದೇ ಭೂಮಿ ಕಳೆದುಕೊಂಡಿರುವ ನೂರಾರು ರೈತರು ಸಂಕಷ್ಟದಲ್ಲಿದ್ದಾರೆ.
ಈ ಬಗ್ಗೆ ವಿವಿಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ನಮ್ಮ ನೋವಿನ ಮನವಿ ನೀಡಲಾಗುತ್ತದೆ. ಗ್ರಾಪಂ ಅಡಿಯಲ್ಲಿ ಬರುವ ಭೂಮಿಗಳನ್ನು ಗ್ರಾಮಗಳೆಂದು ಪರಿ ಗಣಿಸಬೇಕೆಂದು ಹಾಗೂ ಬೈಪಾಸ್ ನಿರ್ಮಾಣ ಕೈಬಿಟ್ಟು ಫ್ಲೈಓವರ್ ನಿರ್ಮಾಣ ಮಾಡಿದರೆ ರೈತರ ಕೃಷಿ ಭೂಮಿಗಳು ಉಳಿಯುತ್ತವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಚಿಂತನೆ ನಡೆಸಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಬೆನ್ನಾಯ್ಕನಹಳ್ಳಿ ದೇವರಾಜು, ತಿಮ್ಮಲಾಪುರ ದೇವರಾಜು, ಆರ್‌ಕೆಎಸ್ ಲೋಕೇಶ್, ಹುಚ್ಚಗೊಂಡನಹಳ್ಳಿ ಲೋಕೇಶ್, ಶ್ರೀಕಾಂತ್, ಮನೋಹರ್, ಅಶೋಕ್, ಶಿವಲಿಂಗಯ್ಯ, ನಂಜಾಮರಿ ಸೇರಿದಂತೆ ಬೈರ ನಾಯಕನಹಳ್ಳಿ, ಮಾದೀಹಳ್ಳಿ, ಹುಚ್ಚಗೊಂಡನಹಳ್ಳಿ, ಈಡೇನಹಳ್ಳಿ, ಶೆಟ್ಟಿಹಳ್ಳಿ, ಕರಡಿ ಗ್ರಾಮದ ರೈತರು ಪಾಲ್ಗೊಂಡಿದ್ದರು.