Advertisement
ಜಿಲ್ಲೆಯಲ್ಲಿ ಪಾಂಡೇಶ್ವರ, ಕದ್ರಿ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳದಲ್ಲಿ ಅಗ್ನಿಶಾಮಕ ಠಾಣೆಯ ತುರ್ತು ಸೇವೆಗಳ ಮೂಲಕ ತಾಲೂಕು ಮಟ್ಟದಲ್ಲಿ ಕಾರ್ಯಾ ಚರಿಸುತ್ತಿದ್ದು, ಇದೀಗ ಮೂಲ್ಕಿ ತಾಲೂಕು ಕೇಂದ್ರವಾಗಿ ಘೋಷಣೆ ಯಾಗಿರುವುದರಿಂದ ಉಡುಪಿ ಮತ್ತು ದ.ಕ. ಜಿಲ್ಲೆಯ ಮಧ್ಯಭಾಗದಲ್ಲಿ ಕಾರ್ಯಗತಗೊಳ್ಳಲಿದೆ.
ಕೊಲ್ನಾಡು ಕೈಗಾರಿಕೆ ಪ್ರದೇಶದ ಹೆದ್ದಾರಿ ಬಳಿಯ ಪೆಟ್ರೋಲ್ ಪಂಪ್‌ನ ಬಳಿಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಒಂದು ಎಕ್ರೆ ಪ್ರದೇಶವನ್ನು ಸರಕಾರ ಮೀಸಲಿರಿಸಿತ್ತು. ಈ ಜಮೀನಿನಲ್ಲಿ ಪಂಚಾಯತ್‌ನ ನೀರು ಶೇಖರಣೆಯ ಸಂಪು ಇದೆ. ಇದಕ್ಕೆ 6.25 ಸೆಂಟ್ಸ್ ಮೀಸಲಾಗಿದ್ದು ಉಳಿದ ಜಮೀನನ್ನು ಅಗ್ನಿಶಾಮಕ ಠಾಣೆಗೆ ನೀಡಲು ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಸಹಿತ ಕಂದಾಯ ಇಲಾಖೆಯು ಶಿಫಾರಸ್ಸು ಮಾಡಿದೆ. ಈಗ ಜಮೀನನ್ನು ಮಂಗಳೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ರಿಜಿಸ್ಟ್ರಿ ಮಾಡಲಾಗಿದೆ. ನಗರ ಪಂಚಾಯತ್‌ಸಹ ತನ್ನ ಶುಲ್ಕವನ್ನು ಪಡೆಯದೇ ಸಹಕಾರ ನೀಡಿದೆ, ಕೆಐಎಡಿಬಿ ಸಹ ಅಧಿಕೃತ ಜಮೀನಿನ ಶುಲ್ಕವನ್ನು ಸಹ ಪಡೆಯದೇ ಉಚಿತ ವಾಗಿ ಹಂಚಿಕೆ ಮಾಡಲು ಅನುಮೋದಿಸಿದೆ.
Related Articles
ನಿರ್ಧರಿಸಿದ ಜಮೀನಿನಲ್ಲಿ ಅಗ್ನಿಶಾಮಕ ಠಾಣೆ ಆರಂಭವಾಗು ವವರೆಗೂ ಖಾಲಿ ಇರುವ ನಗರ ಪಂಚಾ ಯತ್ ಹತ್ತಿರದ ಸರಕಾರಿ ಕಟ್ಟಡದಲ್ಲಿ ಠಾಣೆಯನ್ನು ತೆರೆದು ಕಾರ್ನಾಡು ಗಾಂಧಿಧೀ ಮೈದಾನದಲ್ಲಿ ಘಟಕದ ಕವಾಯತ್ತನ್ನು ಮಾಡಬಹುದು. ಮಡಿವಾಳ ಕೆರೆಯಲ್ಲಿನ ನೀರನ್ನು ಘಟಕಕ್ಕೆ ಉಪಯೋಗಿಸುವ ಅವಕಾಶ ಇದೆ ಎಂದು ಮೂಲ್ಕಿ ನಾಗರಿಕ ಸಮಿತಿಯ ಮನ್ಸೂರ್ ಅವರು ಹೇಳುತ್ತಾರೆ.
Advertisement
ಸಮೀಕ್ಷೆ ನಡೆಯಲಿದೆಮೂಲ್ಕಿ ಸುತ್ತಮುತ್ತ ಪ್ರದೇಶಕ್ಕೆ ಅನುಗುಣವಾಗಿ ಅಗ್ನಿಶಾಮಕ ದಳ ಆರಂಭಿ ಸ ಲು ಸರಕಾರದ ನಿರ್ದೇಶನದಂತೆ ಗ್ರಾಮ, ಗ್ರಾಮಸ್ಥರ ಹಾಗೂ ಪರಿಸರದ ಬಗ್ಗೆ ಸಂಪೂರ್ಣ ಮಾಹಿತಿ ಯೊಂದಿಗೆ ಜಮೀನು ಲಭ್ಯತೆ ಪತ್ರ ವನ್ನು ಕಂದಾಯ ಇಲಾಖೆಯ ಮೂಲಕ ಕ್ರೂಡಿಕರಿಸಿಕೊಂಡು ಮೇಲ ಧಿಕಾರಿಗಳಿಗೆ ವರದಿ ಮಾಡಿದ್ದೇವೆ. ಜತೆಗೆ ಪ್ರತಿಗಳನ್ನು ರಾಜ್ಯದ ಕೇಂದ್ರ ಕಚೇರಿಗೆ ಕಳುಹಿಸಿದ್ದೇವೆ, ಕೇಂದ್ರದಿಂದ ಸಮೀಕ್ಷೆ ನಡೆಸಿ, ಠಾಣೆಗೆ ಬೇಕಾದ ಕಟ್ಟಡ, ವಾಹನ, ಸಿಬಂದಿ ಬಗ್ಗೆ ಯೋಜನೆ ರೂಪಿಸುವ ಕಾರ್ಯ ಇಲಾಖೆ ಮಟ್ಟದಲ್ಲಿ ನಡೆಯಲಿದೆ.
- ಟಿ.ಎನ್. ಶಿವಂಶಕರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಗತ್ಯವಿದ್ದೆಡೆ ಠಾಣೆ
ಮೂಲ್ಕಿಯಲ್ಲಿ ಅಗ್ನಿಶಾಮಕ ಠಾಣೆಯು ಬಹು ವರ್ಷದ ಬೇಡಿಕೆಯಾಗಿದೆ. ಮೂಲ್ಕಿ ಪ್ರದೇಶ ಜಿಲ್ಲೆಯ ಗಡಿಭಾಗದಲ್ಲಿದೆ ಮತ್ತು ಪಕ್ಕದ ಉಡುಪಿ ಜಿಲ್ಲೆಗೂ ಇದರ ಅನುಕೂಲತೆ ಇದೆ ಜನ ಸಂಖ್ಯೆ ಸಹಿತ, ಅಭಿವೃದ್ಧಿ ಹೊಂದುತ್ತಿರುವ ಮೂಲ್ಕಿಯ ಠಾಣೆಯನ್ನು ಉತ್ತಮ ರೀತಿಯಲ್ಲಿ ನಿರ್ಮಿಸಲು ಪ್ರಯತ್ನಿಸಲಿದ್ದೇನೆ.
- ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ-ಮೂಡಬಿದಿರೆ ಕ್ಷೇತ್ರ ಮೂರು ದಶಕದ ಹೋರಾಟ
ಮೂಲ್ಕಿಗೆ ಒಂದು ಅಗ್ನಿಶಾಮಕ ದಳದ ಅವಶ್ಯಕತೆಯನ್ನು ಕಳೆದ ಮೂರು ದಶಕದಿಂದ ಮೂಲ್ಕಿ ಪುರಸಭೆಯ ಅಧ್ಯಕ್ಷರಾಗಿದ್ದ ಶೇಖರ ಕೋಟ್ಯಾನ್ ಅವರ ಮೂಲಕ ಸರಕಾರಕ್ಕೆ ಬೇಡಿಗೆ ಸಲ್ಲಿಸಿದ್ದೆವು, ಅನಂತರ ನಿರಂತರವಾಗಿ ವಿವಿಧ ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸುತ್ತಲೇ ಇದ್ದೆವು.
-ಹರಿಕೃಷ್ಣ ಪುನರೂರು, ಅಧ್ಯಕ್ಷರು,ನಾಗರಿಕ ಸಮಿತಿ ಮೂಲ್ಕಿ - ನರೇಂದ್ರ ಕೆರೆಕಾಡು