ಸರಕಾರಿ ನೌಕರಿ ಸಿಗುವುದೆಂಬ ಆಸೆಗೆ ಫಲವತ್ತಾದ ಭೂಮಿ ನೀಡಿದ ರಾಯಚೂರು ಜಿಲ್ಲೆಯ ರೈತರು ಈಗ ಭೂಮಿಯೂ ಇಲ್ಲದೇ ಅತ್ತ ನೌಕರಿ ಯೂ ಸಿಗದೆ ತ್ರಿಶಂಕು ಸ್ಥಿತಿಗೆ ಸಿಲುಕಿದ್ದಾರೆ.
ಸಮೀಪದ ಯರಮರಸ್ ಸೂಪರ್ ಕ್ರಿಟಿಕಲ್ ಪವರ್ ಸ್ಟೇಶನ್ (ವೈಟಿಪಿಎಸ್) ಎಂಬ ದೈತ್ಯಾಕಾರದ ವಿದ್ಯುತ್ ಉತ್ಪಾದನ ಘಟಕ ಸ್ಥಾಪಿಸಿದ ಸರಕಾರ; ಕೊಟ್ಟ ಮಾತಿ ನಂತೆ ನಡೆದುಕೊಳ್ಳದೆ ರೈತ ಕುಟುಂಬಗ ಳನ್ನು ಸಂಕಷ್ಟಕ್ಕೆ ದೂಡಿದೆ. ಆರಂಭದಲ್ಲಿ ಭೂಮಿಗೆ ಪರಿಹಾರದ ಜತೆಗೆ ಪ್ರತೀ ಕುಟುಂ ಬಕ್ಕೆ ಒಂದು ಉದ್ಯೋಗ ನೀಡುವುದಾಗಿ ತಿಳಿಸಿತ್ತು. ಸುತ್ತಲಿನ ಗ್ರಾಮಗಳಲ್ಲಿ 2 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಆಸೆ ಯಿಂದ ಪರಿಸರವಾದಿಗಳ ವಿರೋಧದ ನಡುವೆಯೂ ರೈತರು ಭೂಮಿ ನೀಡಿದ್ದರು. ಏಗನೂರು, ವಡೂÉರು, ಹೆಗ್ಗಸನಹಳ್ಳಿ, ಚಿಕ್ಕಸ ಗೂಗುರು, ಕುಕುನೂರು ಗ್ರಾಮದ ರೈತ ರಿಂದ ಸುಮಾರು 1,100ಕ್ಕೂ ಅಧಿ ಕ ಎಕ್ರೆ ಭೂಮಿ ಸ್ವಾಧಿಧೀನಪಡಿಸಿಕೊಳ್ಳಲಾಯಿತು.
ಭೂಮಿ ಪಡೆದ ಕೆಪಿಸಿಎಲ್ ಪರಿಹಾರದ ಚೆಕ್ ಮತ್ತು ಭೂ ಸಂತ್ರಸ್ತ ಪ್ರಮಾಣ ಪತ್ರ ನೀಡುವಾಗ ಉದ್ಯೋಗ ನೀಡುವುದಾಗಿ ತಿಳಿಸಿತ್ತು. 259ಕ್ಕೂ ಅ ಧಿಕ ಕುಟುಂಬಗಳು ಭೂಮಿ ಕಳೆದುಕೊಂಡಿವೆ. ಅದರ ಜತೆಗೆ ಜಿಲ್ಲಾಡಳಿತ 525 ಸಂತ್ರಸ್ತರನ್ನು ಗುರುತಿಸಿತ್ತು. ಅದರಲ್ಲಿ ಈವರೆಗೆ 110ರ ಆಸುಪಾಸು ಜನ ರಿಗೆ ಉದ್ಯೋಗ ನೀಡಿದ್ದು, ಉಳಿದವರಿಗೆ ಉದ್ಯೋಗ ನೀಡಲು ಕುಂಟು ನೆಪ ಹೇಳಲಾಗುತ್ತಿದೆ. 2013ರಲ್ಲಿ ಭೂ ಸಂತ್ರಸ್ತರ ಪಟ್ಟಿ ಗೆಜೆಟ್ ಅ ಧಿಸೂಚನೆ ಹೊರಡಿಸಲಾ ಗಿತ್ತು. ಸಂತ್ರಸ್ತರಿಗೆ ಉದ್ಯೋಗ ನೀಡುವ ಭರ ವಸೆ ನೀಡಲಾಗಿತ್ತು. ಒಂದು ಪಹಣಿಗೆ ಒಂದೇ ಉದ್ಯೋಗ ನೀಡಲಾಗುವುದು ಎಂಬ ಭರ ವಸೆ ನೀಡಲಾಯಿತು. ಇದು ಕುಟುಂಬದಲ್ಲೇ ಕಲಹ ಸೃಷ್ಟಿಸಿತು. ರೈತರಿಂದ ಭೂಮಿ ಪಡೆಯುವಾಗ ಇಲ್ಲಸಲ್ಲದ ಭರ ವಸೆ ನೀಡಿದ್ದ ಕೆಪಿಸಿಎಲ್ ಈಗ ತನ್ನ ನಿಲುವು ಬದಲಿಸಿದೆ. ಸಂಬಂಧವಿಲ್ಲದ ಷರತ್ತುಗಳನ್ನು ಒಡ್ಡುವ ಮೂಲಕ ಅರ್ಹ ಫಲಾನು ಭವಿಗಳನ್ನು ಉದ್ಯೋಗ ವಂಚಿತರನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿ ಸಂತ್ರಸ್ತರು ಜಿಲ್ಲಾಡಳಿತಕ್ಕೆ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಸಾಕಷ್ಟು ಜನ ಆಸ್ತಿ ಹಂಚಿಕೊಂಡರೂ ಪಹಣಿಯಲ್ಲಿ ಒಂದೇ ಹೆಸರಿದೆ. ಒಂದು ಪಹಣಿಗೆ ಒಂದೇ ಉದ್ಯೋಗ ಎಂಬ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ ಸಂತ್ರಸ್ತರು, ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಪಡೆದು ಕೆಪಿಸಿಎಲ್ ನಿಯಮಾವಳಿ ಪರಿಶೀಲಿಸಿ ದ್ದಾರೆ. ಆ ರೀತಿ ಎಲ್ಲೂ ಉಲ್ಲೇಖವಾಗಿಲ್ಲ. ನಮಗೆ ಕೆಲಸ ನೀಡಬಾರದು ಎನ್ನುವ ಕಾರಣಕ್ಕೆ ನೆಪ ಹೇಳದೆ ಕೆಲಸ ನೀಡಿ ಎಂದು ಮತ್ತೆ ಮನವಿ ಸಲ್ಲಿಸಿದರು. ಅಲ್ಲದೇ ನಮ್ಮ ಲ್ಲಿರುವುದು ಕೇವಲ ಟೆಕ್ನಿಕಲ್ ಹುದ್ದೆಗಳು ಮಾತ್ರ. ಕನಿಷ್ಟ ಡಿಪ್ಲೊಮಾ ಮುಗಿಸಿದರೆ ಕೆಲಸ ನೀಡಲಾಗುವುದು ಎನ್ನುತ್ತಿದೆ. ಆದರೆ ಬಹುತೇಕ ರೈತರ ಮಕ್ಕಳು ಉನ್ನತ ವ್ಯಾಸಂಗ ಮಾಡಿದರೂ ನಾನ್ ಟೆಕ್ನಿಕಲ್ ಕೋರ್ಸ್‌ಗ ಳನ್ನೇ ಓದಿದ್ದಾರೆ. ಹಳೇ ಪಹಣಿಗಳು, ಆಧಾರ್ ಕಾರ್ಡ್, 2009-10ರಲ್ಲಿ ಪಾವತಿ ಸಿದ ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಸೇರಿ ದಂತೆ ಅನೇಕ ದಾಖಲೆ ಕೇಳುತ್ತಿದ್ದಾರೆ. ಆಗಿನ ದಾಖಲೆ ಎಲ್ಲಿಂದ ತರಬೇಕು?
ಸಿದ್ಧಯ್ಯಸ್ವಾಮಿ ಕುಕುನೂರು