Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಭೂಮಿ ಖರೀದಿಸಿದವರು ಅದರ ಪರಿವರ್ತನೆಗಾಗಿ ಆರು ತಿಂಗಳ ಕಾಯಬೇಕಾಗಿತ್ತು.ಆದರೆ ಇನ್ನು ಮುಂದೆ ಅರ್ಜಿ ಹಾಕಿದ ಒಂದೇ ದಿನದಲ್ಲಿ ಭೂ ಪರಿವರ್ತನೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
Related Articles
Advertisement
ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ
ರೈತರಿಗೆ ಪರಿಹಾರ ಅಕಾಲಿಕ ಮಳೆಯಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ ವಿತರಣೆ ಕಾರ್ಯ ಚುರುಕುಗೊಳಿಸಿರುವ ರಾಜ್ಯ ಸರ್ಕಾರ, ಕಳೆದ ವಾರದ ವೇಳೆಗೆ 6.6 ಲಕ್ಷ ರೈತರಿಗೆ 443 ಕೋಟಿ ರೂ. ವಿತರಣೆ ಮಾಡಿತ್ತು. ಬುಧವಾರದ ವೇಳೆಗೆ 10,62,237 ರೈತರಿಗೆ 681.90 ಕೋಟಿ ರೂ. ವಿತರಿಸಿದೆ. ಮುಖ್ಯಮಂತ್ರಿಯವರು ಅಧಿಕಾರಿಗಳ ಸಭೆ ನಡೆಸುವ ಮುನ್ನ 1.51 ಲಕ್ಷ ರೈತರಿಗೆ 130 ಕೋಟಿ ರೂ. ಮಾತ್ರ ಪರಿಹಾರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು. ನ.19 ರಂದು ಮುಖ್ಯಮಂತ್ರಿಯವರ ಸಭೆಯ ನಂತರ ಪರಿಹಾರ ವಿತರಣೆ ಚುರುಕುಗೊಂಡಿದ್ದು 9.10 ಲಕ್ಷ ರೈತರಿಗೆ 551 ಕೋಟಿ ರೂ.ವರೆಗೆ ಪರಿಹಾರ ಜಮೆಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.