Advertisement
ಎಲ್ಲೆಲ್ಲಿ ಎಷ್ಟೆಷ್ಟು ಹೆಕ್ಟೇರ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ 13,543 ಎಕರೆ, ದೊಡ್ಡಬಳ್ಳಾಪುರ 26,669, ನೆಲಮಂಗಲ 14,091, ಹೊಸಕೋಟೆ 31,171 ಎಕರೆಯಷ್ಟು ನೀಲಗಿರಿ ಮರಗಳು ಬೇರೂಣಿವೆ. ಇದರಿಂದ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹಿಂದೆ ತಿಳಿದೋ ತಿಳಿಯದೋ ನೀಲಗಿರಿ ಮರ ಬೆಳೆಸಿದ್ದಾರೆ. ಅನೇಕ ರೈತರು ನೀಲಗಿರಿ ಮರ ತೆರವುಗೊಳಿಸಲು ಮುಂದಾಗಿದ್ದಾರೆ. ಆರ್ಥಿಕ ಶಕ್ತಿ ಇಲ್ಲದ ರೈತರು ಬೆಳೆಸಿರುವ ನೀಲಗಿರಿ ಮರಗಳನ್ನು ಪ್ರಸ್ತುತ ದಾನಿಗಳಿಂದ ತೆರವು ಆಂದೋಲನ ಪ್ರಾರಂಭಗೊಂಡಿದೆ ಎಂದು ಹೇಳಿದರು.
Related Articles
Advertisement
15 - 20 ಲೀ.ನೀರು ಬೇಕು: ಒಂದೊಂದು ನೀಲಗಿರಿ ಮರಗಳು ಪ್ರತಿದಿನ 15-20 ಲೀಟರ್ ನೀರು ಹೀರಿಕೊಳ್ಳುವ ಶಕ್ತಿ ಇದೆ. ಇದರಿಂದ ಅಂತರ್ಜಲ ಮಟ್ಟ ಪಾತಾಳಕ್ಕಿಳಿಯುತ್ತಿದೆ. ಇದನ್ನು ಮನಗಂಡು ರೈತರು ಜಿಲ್ಲಾಧಿಕಾರಿಗಳ ಆದೇಶದಂತೆ ಉತ್ತಮ ಕಾರ್ಯ ಮಾಡಲಾಗಿದೆ. 20 ಎಕರೆ ಪ್ರದೇಶದಲ್ಲಿ ನೀಲಗಿರಿ ಮರ ತೆಗೆಯಲು ಮುಂದಾಗಿದ್ದೇವೆ. ಇಡೀ ಜಿಲ್ಲೆಯಲ್ಲಿ ನೀಲಗಿರಿ ಮರ ತೆಗೆದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಆ ಖಾಲಿ ಜಾಗದಲ್ಲಿ ಇತರೆ ಮರ ಬೆಳೆಸಿದರೆ ಮೋಡ ಬಿತ್ತನೆ ಮಾಡುವ ಅವಶ್ಯಕತೆ ಇಲ್ಲ. ತಾನಾಗಿಯೇ ಮೋಡ ಕಟ್ಟಿಕೊಂಡು ಮಳೆ ಬರುವುದರಲ್ಲಿ ಸಂದೇಹವಿಲ್ಲ.
ಈಗಾಗಲೇ ಒಂದು ಎಕರೆ ಪ್ರದೇಶದಲ್ಲಿ ನೀಲಗಿರಿ ಮರ ತೆಗೆಸಬೇಕಾದರೆ ಜೆಸಿಬಿ, ಡೀಸೆಲ್ ಬಿಟ್ಟು ಅಂದಾಜು 10-12ಸಾವಿರ ರೂ. ಖರ್ಚು ಬರುತ್ತದೆ. ರೈತರು ಇಂತಹ ಕಾರ್ಯಗಳಿಗೆ ಮುಂದಾದರೆ ಮುಂದಿನ ದಿನಗಳಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಈ ಆಂದೋಲನ ಬಹಳ ಸಹಕಾರಿಯಾಗಲಿದೆ ಎಂದು ಹೇಳಿದರು. ಇದೇ ವೇಳೆ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಹಾಗೂ ರೈತ ಚನ್ನಪ್ಪ ನೀಲಗಿರಿ ಕಟಾವು ಆದ ಜಾಗದಲ್ಲಿ ಬೇರೊಂದು ಸಸಿ ನೆಟ್ಟು ಸಾಂಕೇತಿಕವಾಗಿ ನೀರು ಹಾಯಿಸಿದರು. ಸ್ಥಳದಲ್ಲಿ ಮಾಲಿಕ ಚನ್ನಪ್ಪ, ತಹಶೀಲ್ದಾರ್ ಕೇಶವಮೂರ್ತಿ, ಶಿರಸ್ತೇದಾರ್ ಬಾಲಕೃಷ್ಣ, ಆರ್‌ಐ ರಮೇಶ್, ಮುಖಂಡರಾದ ಪಟ್ಟಾಭಿ, ವೆಂಕಟೇಶ್, ಸಮಾಜ ಸೇವಕ ಪ್ರವೀಣ ರುದ್ಧಂ, ಗ್ರಾಮಸ್ಥರು ಇದ್ದರು.
ಬ್ಯಾಂಕ್‌ನಿಂದ ಸಾಲ ಸಿಗಲ್ಲ: ರೈತರು ಖಾಸಗಿಯಾಗಿ ಬೆಳೆಸಿರುವ ಮರಗಳನ್ನು ಬುಡಸಮೇತ ಕಿತ್ತು ಹಾಕಲೇಬೇಕು. ಇಲ್ಲದಿದ್ದಲ್ಲಿ ಜಮೀನಿನ ಪಹಣಿಯಲ್ಲಿನ 9ನೇ ಕಾಲಂನಲ್ಲಿ ಸರ್ಕಾರದ್ದು ಎಂದು ನೋಂದಣಿ ಮಾಡಲಾಗುತ್ತದೆ. ಈ ರೀತಿ ದಾಖಲೆಯಾದರೆ ಯಾವುದೇ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲವೆಂದು ಜಿಲ್ಲಾಧಿಕಾರಿ ಕರೀಗೌಡ ಎಚ್ಚರಿಸಿದರು.