Advertisement
ಬಹುನಿರೀಕ್ಷೆಯ ಮುನಿರಾಬಾದ್ -ಮಹೆಬೂಬನಗರ ರೈಲ್ವೆ ಮಾರ್ಗ ಯೋಜನೆ ಕೊನೆಗಳಿಗೆಯಲ್ಲಿ ವೇಗ ಪಡೆದುಕೊಂಡಿದೆ. 2001ರಿಂದಲೇ ಆರಂಭಗೊಂಡ ಯೋಜನೆಅನುಷ್ಠಾನ ಪ್ರಕ್ರಿಯೆ ವಿವಿಧ ತೊಡಕುಗಳಬಳಿಕ (19 ವರ್ಷಗಳ ನಂತರ) ವೇಗ ಪಡೆದಿದೆ. ಒಂದೆಡೆ ರೈಲ್ವೆ ಹಳಿ ನಿರ್ಮಾಣ,ಮತ್ತೂಂದೆಡೆ ಭೂಸ್ವಾಧೀನ ಕೆಲಸವನ್ನುಚುರುಕುಗೊಳಿಸಿರುವುದರಿಂದ ರೈಲು ಓಡಿಸುವ ಯೋಜನೆ ಅಂತಿಮ ಸ್ವರೂಪ ಪಡೆದಿದೆ.
Related Articles
Advertisement
ಇದನ್ನೂ ಓದಿ : ನಟಿ ಭಾರತಿ ಸಿಂಗ್ ಬೇಲ್ ಗೆ ನೆರವು: ಇಬ್ಬರು ಎನ್ ಸಿಬಿ ಅಧಿಕಾರಿಗಳು ಅಮಾನತು!
ಸಿಂಧನೂರು ಭಾಗದ ಬಾಕಿ 146.06 ಎಕರೆ ಭೂಸ್ವಾಧೀನಕ್ಕೆ ಅಂತಿಮ ತೀರ್ಪಿಗೆ ಸಿದ್ಧತೆ ನಡೆದಿದ್ದು, ಇಲ್ಲಿನ ರೈತರಿಗೆ 55.91 ಕೋಟಿ ರೂ. ಪರಿಹಾರ ನೀಡಲು ಗುರುತಿಸಲಾಗಿದೆ. ಮಾನ್ವಿ ತಾಲೂಕಿನಲ್ಲಿ ಈ ಕೆಲಸ ಪೂರ್ಣಗೊಂಡರೆ, ಭೂಸ್ವಾಧೀನ ಕೆಲಸವೇ ಕೊನೆಗೊಳ್ಳಲಿದೆ. ಈ ಎರಡು ತಾಲೂಕಿನಲ್ಲಿ 98 ಕಿ.ಮೀ.ನಷ್ಟು ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ಮುಗಿದು ಬಿಟ್ಟರೆ, ರೈಲು ಓಡಿಸುವುದಕ್ಕೆ ಮುಹೂರ್ತ ನಿಗದಿಪಡಿಸುವುದಷ್ಟೇ ಬಾಕಿ ಉಳಿಯಲಿದೆ.
18 ಪ್ಲಸ್ 80 ಗುರಿ : ಕೊಪ್ಪಳ ಜಿಲ್ಲೆಯ ಗಿಣಿಗೇರಾದಿಂದ ರಾಯಚೂರಿಗೆ ರೈಲು ಓಡಾಟ ಆರಂಭಗೊಳ್ಳಲು ಕಾರಟಗಿ ಸಮೀಪ 18 ಕಿ.ಮೀ, ಸಿಂಧನೂರು-ಮಾನ್ವಿ ಒಳಗೊಂಡು 80 ಕಿ.ಮೀ. ಉದ್ದದಷ್ಟು ರೈಲ್ವೆ ನಿರ್ಮಾಣ ಕೆಲಸವಾಗಬೇಕಿದೆ. ಅಧಿಕಾರಿಗಳು ಈಗಾಗಲೇ ಸಿಂಧನೂರು ಗಡಿಭಾಗದವರೆಗೂ ಕಾಮಗಾರಿಯನ್ನು ಮುಂದುವರಿಸಿದ್ದು, ಇದೇ ವೇಗ ಕಾಯ್ದುಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ದುಂಬಾಲು ಬಿದ್ದಿದ್ದಾರೆ.
ಕಾರಟಗಿ-ಸಿಂಧನೂರುವರೆಗೆ 18 ಕಿ.ಮೀ. ವರೆಗೆ ಹಳಿ ನಿರ್ಮಾಣ ನಡೆದಿದೆ. ಸಿಂಧನೂರು-ರಾಯಚೂರುವರೆಗೆ 80 ಕಿ.ಮೀ. ಕಾಮಗಾರಿ ಮುಗಿದರೆ, ಯೋಜನೆಯ ಎಲ್ಲ ಕೆಲಸ ಪೂರ್ಣಗೊಂಡಂತಾಗಲಿದೆ. ಸದ್ಯ ಯಾವುದೇ ಬಿಲ್ ಬಾಕಿಯಿಲ್ಲ. –ಉಮಾಮಹೇಶ್ವರ್,ಎಇಇ, ನೈರುತ್ಯ ರೈಲ್ವೆ ಇಲಾಖೆ
-ಯಮನಪ್ಪ ಪವಾರ