Advertisement

ಬೃಹತ್‌ ಉದ್ದಿಮೆ ಸ್ಥಾಪಿಸಲು ಮತ್ತೆ ಭೂಮಿ ಸ್ವಾಧೀನ: ನಿರಾಣಿ

08:01 PM Aug 29, 2021 | Team Udayavani |

ಕಲಬುರಗಿ: ಮಹಾನಗರದ ಸರ್ವಾಂಗೀಣ ಅಭಿವೃದ್ಧಿಗೆ ಸ್ಮಾರ್ಟ್‌ ಸಿಟಿಗೆ ಯತ್ನ, ಹಸಿರು ಮಹಾನಗರಕ್ಕಾಗಿ ವ್ಯಾಪಕ ಸಸಿಗಳ ನೆಡುವಿಕೆ, ಪ್ರತಿ ಮನೆಗೆ ಪೈಪ್‌ಲೈನ್‌ ಮುಖಾಂತರ ಅಡುಗೆ ಅನಿಲ ಸರಬರಾಜು, ನೂತನ ಬಡಾವಣೆಗಳಿಗೆ ಗುಣಮಟ್ಟದ ರಸ್ತೆ, ಒಳಚರಂಡಿ ನಿರ್ಮಾಣ, ಗೃಹ ನಿರ್ಮಾಣ ನಕ್ಷೆ ಅನುಮೋದನೆಗೆ ಆನ್‌ಲೈನ್‌ ಮುಖಾಂತರ ಸಲ್ಲಿಸಲು ಅವಕಾಶ, ಪೌರ ಕಾರ್ಮಿಕರಿಗೆ ನಿಯಮಿತವಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉದ್ಯಾನವನ ಅಭಿವೃದ್ಧಿಪಡಿಸುವುದು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವಿಶೇಷ ಘಟಕ ಸ್ಥಾಪನೆ, ಸಾರ್ವಜನಿಕ
ಶೌಚಾಲಯ ಹೆಚ್ಚಳ…

Advertisement

ಇದು ಮಹಾನಗರಪಾಲಿಕೆ ಚುನಾವಣೆ ಅಂಗವಾಗಿ ಬಿಜೆಪಿ ಹೊರಡಿಸಿದ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು. ಶನಿವಾರ ನಗರದ ಖಾಸಗಿ ಹೋಟೆಲ್‌ ದಲ್ಲಿ ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಶಾಸಕರು ಹಾಗೂ ಪಕ್ಷದ ಮುಖಂಡರು ಪ್ರಣಾಳಿಕೆ ಬಿಡುಗಡೆಗೊಳಿಸಿ ವಿವರಣೆ ನೀಡಿದರು.

ಸಚಿವ ಮರುಗೇಶ ನಿರಾಣಿ ಮಾತನಾಡಿ, ಮಹಾ ನಗರ ಅಭಿವೃದ್ಧಿ ವೇಗ ಹೆಚ್ಚಿಸಲು ಕಲಬುರಗಿ ಮಹಾನಗರ ಸ್ಮಾರ್ಟ್‌ ಸಿಟಿ ಮಾಡಲು ಬಿಜೆಪಿ ಸರ್ಕಾರ ಬದ್ಧತೆ ಹಾಗೂ ಸಂಕಲ್ಪ ಹೊಂದಿದೆ. ಕಲಬುರಗಿ ಸ್ಮಾರ್ಟ್‌ ಸಿಟಿಯಾದರೆ ಸಾವಿರ ಕೋಟಿ ರೂ. ವೆಚ್ಚದಲ್ಲಿ ಮಹಾನಗರದಲ್ಲಿ ಅತ್ಯುತ್ತಮ ರಸ್ತೆಗಳು, ಸುಸಜ್ಜಿತ ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ಹತ್ತಾರು ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ ಎಂದರು.
ಈಗಾಗಲೇ ಮೈಸೂರು, ಮಂಗಳೂರು, ತುಮಕೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದೇ ಮಾದರಿಯಲ್ಲಿ ಕಲಬುರಗಿಯೂ ಸ್ಮಾರ್ಟ್‌ ಸಿಟಿಗೆ ಸೇರಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ:ಪ್ರೇಮಿಗಳೆ ಟಾರ್ಗೆಟ್| ಮೈಸೂರು ವಿದ್ಯಾರ್ಥಿನಿ ಅತ್ಯಾಚಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

ಈಗಾಗಲೇ ಕಲಬುರಗಿ ಮಹಾನಗರದಲ್ಲಿ ನಿರಂತರ ಕುಡಿಯುವ ನೀರು ಪೂರೈಕೆಗಾಗಿ 837 ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆಗೆ ಅನುಮೋದನೆ ನೀಡಲಾಗಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಬೃಹತ್‌ ಉದ್ದಿಮೆ ಸ್ಥಾಪಿಸಲು ಮತ್ತೆ ಒಂದು ಸಾವಿರ ಎಕರೆ ಭೂಮಿ ಪಡೆಯಲು ಉದ್ದೇಶಿಸಲಾಗಿದೆ. ಒಟ್ಟಾರೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಲಬುರಗಿ ಮಹಾನಗರ ಹಾಗೂ ಜಿಲ್ಲೆ ಅಭಿವೃದ್ಧಿಗೆ ಬದ್ಧತೆ ಹೊಂದಿದೆ ಎಂದು
ಸಚಿವರು ಪುನರುಚ್ಚರಿಸಿದರು.

Advertisement

ಡಿಸಿಸಿ ಬ್ಯಾಂಕ್‌, ಕೆಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲಕುಮಾರ ಸೂರನ್‌, ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ. ಪಾಟೀಲ, ಶಶೀಲ್‌ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ಧಾಜೀ ಪಾಟೀಲ ಮುಂತಾದವರಿದ್ದರು.

ಸೋಮಾರಿ ಹೇಳಿಕೆಗೆ
ಸಚಿವರ ಕ್ಷಮೆಯಾಚನೆ
ಕಲಬುರಗಿ ಜಿಲ್ಲೆಯ ಜನರು ಸೋಮಾರಿಗಳು ಎಂಬುದಾಗಿ ಬಾಗಲಕೋಟೆಯಲ್ಲಿ ಇತ್ತೀಚೆಗೆ ಕಲಬುರಗಿ ಜನ ಸೋಮಾರಿಗಳು ಎನ್ನುವ ಹೇಳಿಕೆಗೆ ಸಚಿವ ನಿರಾಣಿ ಕ್ಷಮೆಯಾಚಿಸಿದರಲ್ಲದೇ ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ. ಜನರ ಕಾಳಜಿ ಇಟ್ಟುಕೊಂಡೇ ಎದೆಯಾಳದಿಂದ ಮಾತುಗಳನ್ನು ಹೇಳಿದ್ದೇನೆ ಎಂದು ವಿವರಣೆ ನೀಡಿದರು.

ಒಂದೂ ಯೋಜನೆ ತಿಳಿಸಲಿಲ್ಲ
ಕೇಂದ್ರದಲ್ಲಿ 7 ವರ್ಷ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಕಲಬುರಗಿಗೆ ಒಂದೇ ಒಂದು ಯೋಜನೆ ಬಂದ ವಿವರಣೆ ನೀಡಿ
ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಸಚಿವರು, ಶಾಸಕರು ಮೌನಕ್ಕೆ ಶರಣಾದರು. ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸಲಿಕ್ಕೆ ಆಗಲಿಲ್ಲ. ದೂರದರ್ಶನ ಕೇಂದ್ರ ಬಂದ್‌ ಮಾಡಲಾಗುತ್ತಿದೆ. ಏಮ್ಸ್‌ ಬೇರೆಡೆಹೋಯಿತು. ಹೀಗೆ ಒಂದೊಂದೇ ಅವಕಾಶಗಳನ್ನುಕಿತ್ತುಕೊಳ್ಳಲಾಗುತ್ತಿದೆ.
ಡಬಲ್‌ ಇಂಜಿನ್‌ ಸರ್ಕಾರವಾದರೆ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ್ದಿರಿ.ಕನಿಷ್ಟ ಪಕ್ಷ ಸಚಿವ ಸ್ಥಾನ ಕೊಡಲಿಕ್ಕೂಆಗುತ್ತಿಲ್ಲ. ಸರ್ಕಾರ ರಚನೆಯಾಗಿ ಎರಡು ವರ್ಷಗಳಾದರೂ 371ನೇ(ಜೆ)ಕಲಂ ಸಮರ್ಪಕ ಜಾರಿಗೆ ಸಚಿವ ಸಂಪುಟದ ಉಪಸಮಿತಿ ರಚಿಸಲು ಸಾಧ್ಯವಾಗಿಲ್ಲ ಎಂಬಿತ್ಯಾದಿ ಪ್ರಶ್ನೆಗಳಿಗೆ ಸಚಿವರು, ಶಾಸಕರು ಹಾಗೂ ಬಿಜೆಪಿ ಮುಖಂಡರು ಮೌನವಾಗೇ ಇದ್ದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ.ಹೀಗಾಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲವನ್ನು ಅವಲೋಕಿಸಿ ಬಿಜೆಪಿ ಗೆಲ್ಲಿಸಬೇಕು.
-ಮುರುಗೇಶ ನಿರಾಣಿ, ಸಚಿವ

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿರದಿದ್ದರೂ ಬಿಜೆಪಿ ಸರ್ಕಾರ ಮಹಾನಗರ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದೆ. ವಿಶೇಷ ಪ್ಯಾಕೇಜ್‌, ನಗರೋತ್ಥಾನ ಯೋಜನೆಯಡಿ 150 ಕೋಟಿರೂ.ಅನುದಾನ, ರಸ್ತೆ, ಒಳಚರಂಡಿ ನಿರ್ಮಾಣ,ಜಯದೇವ ಆಸ್ಪತ್ರೆ ನಿರ್ಮಾಣ ಸೇರಿದಂತೆಹಲವಾರು ನಿಟ್ಟಿನಲ್ಲಿ ಶ್ರಮಿಸಲಾಗಿದೆ.
-ದತ್ತಾತ್ರೇಯ ಪಾಟೀಲರೇವೂರ,
ಅಧ್ಯಕ್ಷ ಕೆಕೆಆರ್‌ಡಿಬಿ

ಪಾಲಿಕೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣನೆ ತೆಗೆದುಕೊಂಡಿದೆ. ಆ. 29ರಂದು ಮಹಾನಗರಾದ್ಯಂತ ಪೇಜ್‌ ಕಾರ್ಯಕರ್ತರು ಪ್ರತಿ ಮತದಾರರ ಮನೆಗೆ ತೆರಳಿ ಮಹಾ ಸಂಪರ್ಕ ಸಾಧಿಸಿ ಅಭ್ಯರ್ಥಿ ಪರ ಮತಯಾಚಿಸುವರು.
-ಎನ್‌. ರವಿಕುಮಾರ, ಎಂಎಲ್‌ಸಿ

Advertisement

Udayavani is now on Telegram. Click here to join our channel and stay updated with the latest news.

Next