Advertisement
ಸಮಸ್ಯೆ ಏನು?ವಿಟ್ಲ ಗ್ರಾಮ ಪಂಚಾಯತ್ ಅಸ್ತಿತ್ವದಲ್ಲಿದ್ದ ಕಾಲದಲ್ಲಿ 2000ಕ್ಕೂ ಅಧಿಕ ಕೃಷಿಕರು ಅಕ್ರಮ ಸಕ್ರಮ ಕಾನೂನಿನನ್ವಯ ಸರಕಾರಿ ಸ್ಥಳದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿ ಆ ಜಮೀನಿನ ಮಂಜೂರಾತಿ ಕೋರಿ 50/53 ಅಧಿನಿಯಮಾನುಸಾರ ಅರ್ಜಿ ಸಲ್ಲಿಸಿದ್ದರು. 50/91-92ರಲ್ಲಿ ಮತ್ತು 53/99-2000 ದಲ್ಲಿ ಇವುಗಳೆಲ್ಲ ಸಲ್ಲಿಕೆಯಾಗಿವೆ. ಈ ಮಧ್ಯೆ 2015ರ ಜೂ. 22 ರಂದು ಸರಕಾರದ ಅಧಿ ಸೂಚನೆಯಂತೆ ವಿಟ್ಲ ಗ್ರಾ.ಪಂ.ನ್ನು ಪ.ಪಂ. ಆಗಿ ಮೇಲ್ದರ್ಜೆಗೇರಿಸಲಾಯಿತು. ಪ.ಪಂ. ಘೋಷಣೆಯಾದಂದಿನಿಂದ ಸಾಗುವಳಿ ಮಾಡಿ ಮಂಜೂರಾತಿ ಕೋರಿ ಸಲ್ಲಿಸಿದ ಕೃಷಿಕರ ಅರ್ಜಿಗಳನ್ನು ಕಂದಾಯ ಇಲಾಖೆ ವಿಲೇವಾರಿ ಮಾಡಲಿಲ್ಲ. ಪರಿಣಾಮ, ಕೃಷಿಕರ ಸ್ಥಿತಿ ಅತಂತ್ರವಾಯಿತು.
2014ನೇ ಸಾಲಿನವರೆಗೆ 94ಸಿ ಮೂಲಕ ಅರ್ಜಿ ಸಲ್ಲಿಸಿದವರಿಗೂ ಕಂದಾಯ ಇಲಾಖೆ ಆಕ್ಷೇಪಿಸಿತ್ತು. ಬಳಿಕ ಜಿಲ್ಲಾಧಿಕಾರಿ ಅವರ ಆದೇಶದ ಮೇರೆಗೆ 2015ರ ಜೂ. 22ರೊಳಗೆ ಅರ್ಜಿ ಸಲ್ಲಿಸಿದವರಿಗೆ 94ಸಿ ಮೂಲಕ ಅರ್ಜಿ ವಿಲೇವಾರಿ ಮಾಡಿತ್ತು. ಆಮೇಲಿನ ಅರ್ಜಿಗಳನ್ನು 94ಸಿಸಿ ಮೂಲಕ ಇತ್ಯರ್ಥಗೊಳಿಸಿತು. ವಿಟ್ಲ ಕಸಬಾ ಗ್ರಾಮದಲ್ಲಿ 94ಸಿ ಮೂಲಕ ಮತ್ತು 94ಸಿಸಿ ಮೂಲಕ 1000 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈ ಆದೇಶ ಏಕೆ ಪರಿಗಣಿಸುವುದಿಲ್ಲ?
94ಸಿ ನಿಯಮಕ್ಕೆ ಅನ್ವಯಿಸಿದಂತೆ 50/53 ರಲ್ಲಿಯೂ ಅನ್ವಯವಾಗಬೇಕಲ್ಲವೇ? ವಿಟ್ಲ ಗ್ರಾ.ಪಂ. ಅವಧಿಯಲ್ಲೇ ಅರ್ಜಿ ಸಲ್ಲಿಸಲಾಗಿದ್ದು, ಸಾಗುವಳಿ ಚೀಟಿ ಮಂಜೂರು ಮಾಡುವುದಕ್ಕೆ ಮೀನ ಮೇಷ ಎಣಿಸುವುದು ಏಕೆ? ಬಂಟ್ವಾಳ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಆದೇಶದಲ್ಲಿರುವ ನಿಯಮಾನುಸಾರ ಎಂಬ ಪದವನ್ನು ಬಳಸಿ, ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಏಕೆ? ವಿಟ್ಲ ಕಸಬಾ ಗ್ರಾಮದ ನಾಗರಿಕರಾಗಿರುವ ನಮ್ಮ ಈ ಸಮಸ್ಯೆಯನ್ನು ಬಗೆಹರಿಸುವವರಾರು? ಎಂಬ ಪ್ರಶ್ನೆ ಕೃಷಿಕರದ್ದು.
Related Articles
ವಿಟ್ಲ ಅತಿಥಿಗೃಹದಲ್ಲಿ ವಿಟ್ಲ ಕಸಬಾ ಗ್ರಾಮದವರನ್ನು ಬಿಟ್ಟು, ವಿಟ್ಲ ಹೋಬಳಿಯ ಉಳಿದೆಲ್ಲ ಗ್ರಾಮಗಳ ಕೃಷಿಕರಿಗೆ ಜಮೀನು ಮಂಜೂರಾತಿ ಆಗುತ್ತಿದೆ. ಶಾಸಕರ ಉಪಸ್ಥಿತಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹಕ್ಕುಪತ್ರ ನೀಡುತ್ತಿದ್ದಾರೆ. ಆದರೆ, ನಮಗೆ ಮಾತ್ರ ಅನ್ಯಾಯವಾಗಿದೆ. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದು, ನಮ್ಮ ಪಾಲಿಗೆ ಶೂನ್ಯ ಪರಿಣಾಮವನ್ನುಂಟು ಮಾಡಿತು ಎಂದು ವಿಟ್ಲ ಕಸಬಾ ಗ್ರಾಮದ ಕೃಷಿಕರು ಅಲವತ್ತುಕೊಂಡಿದ್ದಾರೆ.
Advertisement
ನಿಯಮಾನುಸಾರ ಕೊಡಿತಹಶೀಲ್ದಾರರು ಜಿಲ್ಲಾಧಿಕಾರಿಗಳ ಆದೇಶದಲ್ಲಿದ್ದಂತೆ ಹಿಂದಿನ ನಿಯಮಾನುಸಾರವೇ ಸಾಗುವಳಿ ಚೀಟಿ ಅಥವಾ ಹಕ್ಕುಪತ್ರವನ್ನು ನೀಡಲಿ. ನಾವೇನೂ ಅಕ್ರಮ ಮಾಡಬೇಕೆನ್ನುತ್ತಿಲ್ಲ. ನಮ್ಮ ಭೂಮಿ, ನಮಗೆ ಹಕ್ಕುಪತ್ರ ಕೊಡಿ ಎಂದು ಆಗ್ರಹಿಸುತ್ತೇವೆ.
– ಸೀತಾರಾಮ ಶೆಟ್ಟಿ ಒಕ್ಕೆತ್ತೂರು
ವಿಟ್ಲ ಕಸಬಾ ಗ್ರಾಮದ ಕೃಷಿಕರು ಸ್ಪಷ್ಟ ಆದೇಶವಿಲ್ಲ
ಜಿಲ್ಲಾಧಿಕಾರಿಗಳು ಆದೇಶದಲ್ಲಿ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಹಕ್ಕುಪತ್ರವನ್ನು ನೀಡಲು ನಿರ್ದೇಶಿಸಿದ್ದಾರೆ. ಆ ಪ್ರಕಾರ ನಾವು ವಿಟ್ಲ ಕಸಬಾ ಗ್ರಾಮದ ಕೃಷಿಕರಿಗೆ ಭೂಮಿ ಮಂಜೂರುಗೊಳಿಸಿದ ಬಗ್ಗೆ ಸಮಸ್ಯೆ ಉಂಟಾದಲ್ಲಿ ಜಿಲ್ಲಾಧಿಕಾರಿಗಳು ನಮ್ಮನ್ನು ಪ್ರಶ್ನಿಸುತ್ತಾರೆ. ಆದೇಶ ಪತ್ರವನ್ನು ನೋಡಿ ಕ್ರಮ ಕೈಗೊಳ್ಳಬೇಕಿತ್ತು ಎನ್ನುತ್ತಾರೆ. ಆಗ ಅಕ್ರಮಗಳಿಗೆ ನಾವು ಕಾರಣರಾಗುತ್ತೇವೆ. ನನಗೆ ಆ ಬಗ್ಗೆ ಸ್ಪಷ್ಟ ಆದೇಶವಿಲ್ಲ. ಆದುದರಿಂದ ಕ್ರಮ ಕೈಗೊಳ್ಳಲಾಗುವುದಿಲ್ಲ.
– ಪುರಂದರ ಹೆಗ್ಡೆ
ತಹಶೀಲ್ದಾರರು ಉದಯಶಂಕರ್ ನೀರ್ಪಾಜೆ