ಅಹ್ಮದಾಬಾದ್: ಮುಂಬಯಿ-ಅಹ್ಮ ದಾಬಾದ್ ಬುಲೆಟ್ ರೈಲಿಗಾಗಿ ಶೇ.100ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೈ ಸ್ಪೀಡ್ ರೈಲು ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಸೋಮವಾರ ತಿಳಿಸಿದೆ.
1.10 ಲಕ್ಷ ಕೋಟಿ ರೂ. ವೆಚ್ಚದ ಮುಂಬಯಿ-ಅಹ್ಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ಗುಜರಾತ್, ಮಹಾ ರಾಷ್ಟ್ರ, ದಾದರ್ ಮತ್ತು ನಾಗರ್ ಹಾವೇಲಿ ಮೂಲಕ ಹಾದು ಹೋಗಲಿದೆ.
ಈ ಕುರಿತು ಟ್ವೀಟ್(ಎಕ್ಸ್) ಮಾಡಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, “ಮುಂಬ ಯಿ ಮತ್ತು ಅಹಮದಾಬಾದ್ ನಡುವಿನ ಹೈ ಸ್ಪೀಡ್ ರೈಲು ಯೋಜನೆಗಾಗಿ ಬೇಕಾಗಿ ರುವ 1389.49 ಹೆಕ್ಟೇರ್ ಜಾಗವನ್ನು ಸಂಪೂರ್ಣವಾಗಿ ಭೂಸ್ವಾಧೀನಪಡಿಸಿಕೊ ಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
“ಜಪಾನಿನ ಶಿಂಕನ್ಸೆನ್‌ನಲ್ಲಿ ಬಳಸಿ ದಂತೆ ಎನ್‌ಎಚ್‌ಎಸ್‌ಆರ್ ಕಾರಿಡಾರ್‌ನ ಟ್ರಾÂಕ್ ಸಿಸ್ಟಮ್‌ಗಾಗಿ ಬಲವರ್ಧಿತ ಕಾಂಕ್ರೀಟ್ ಟ್ರಾÂಕ್ ಬೆಡ್ ಹಾಕುವ ಕೆಲಸ ಗುಜರಾತ್‌ನ ಸೂರತ್ ಮತ್ತು ಆನಂದ್‌ನಲ್ಲಿ ಪ್ರಾರಂಭವಾಗಿದೆ. ಜೆ- ಸ್ಲಾ Âಬ್ ಬ್ಯಾಲೆಸ್ಟ್‌ಲೆಸ್ ಟ್ರಾÂಕ್ ಸಿಸ್ಟಮ್ ಅನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಬಳಸಲಾಗುತ್ತಿದೆ’ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ತಿಳಿಸಿದೆ.
ಮೊದಲ ಹಂತದಲ್ಲಿ ಗುಜರಾತ್‌ನ ಸೂರತ್ ಮತ್ತು ಬಿಲಿಮೊರೊ ನಡುವೆ ಬುಲೆಟ್ ರೈಲು 2026ರಲ್ಲಿ ಕಾರ್ಯಾ ಚರಣೆಯಾಗುವ ನಿರೀಕ್ಷೆಯಿದೆ.