Advertisement

ಉಗ್ರ ಪರಿವರ್ತಿತ ಹುತಾತ್ಮ ಯೋಧ ಅಹ್ಮದ್‌ ವಾನಿಗೆ ಅಶೋಕ ಚಕ್ರ ಪದವಿ

06:25 AM Jan 24, 2019 | Team Udayavani |

ಶ್ರೀನಗರ : ಹಿಂದೆ ಭಯೋತ್ಪಾದಕನಾಗಿದ್ದು ತದನಂತರ ಯೋಧನಾಗಿ ಪರಿವರ್ತಿತನಾಗಿ ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ  ಆರು ಉಗ್ರರ ಹತ್ಯೆಯ ಎನ್‌ಕೌಂಟ್‌ನಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಲ್ಯಾನ್ಸ್‌ ನಾಯಕ್‌ ನಜೀರ್‌ ಅಹ್ಮದ್‌ ವಾನಿ ಗೆ ಮರಣೋತ್ತರವಾಗಿ ಅಶೋಕ ಚಕ್ರ  ನೀಡಲಾಗಿದೆ. ಈ ಪುರಸ್ಕಾರವು ಭಾರತೀಯ ಸೇನೆಯ ಪರಮೋಚ್ಚ ಶಾಂತಿಕಾಲದ ಗ್ಯಾಲಂಟ್ರಿ ಪ್ರಶಸ್ತಿಯಾಗಿದೆ. 

Advertisement

ಲ್ಯಾನ್ಸ್‌ ನಾಯಕ್‌ ಅಹ್ಮದ್‌ ವಾನಿ ಅವರು  ಸೇನೆಯ ಗ್ಯಾಲಂಟ್ರಿಯಲ್ಲಿ ಎದ್ದ ಕಾಣುವ ವ್ಯಕ್ತಿತ್ವದವರಾಗಿದ್ದು ಇಬ್ಬರು ಉಗ್ರರನ್ನು  ಹತ್ಯೆಗೈದುದಲ್ಲದೆ ಎನ್‌ಕೌಂಟರ್‌ನಲ್ಲಿ ಗಾಯಾಳುಗಳಾಗಿದ್ದ ತನ್ನ ಸಹೋದ್ಯೋಗಿಗಳ ಸಕಾಲಿಕ ಸ್ಥಳಾಂತರದಲ್ಲಿ ಧೈರ್ಯ, ಶೌರ್ಯ ತೋರಿದವರಾಗಿದ್ದಾರೆ.

ಅಂತೆಯೇ ಅವರು ಮಾಡಿರುವ ಪರಮೋಚ್ಚ ತ್ಯಾಗವನ್ನು ಪರಿಗಣಿಸಿ ಅವರಿಗೆ ಭಾರತೀಯ ಸೇನೆಯ ಪರಮೋಚ್ಚ ಅಶೋಕ ಚಕ್ರ ಪದವಿಯನ್ನು ನೀಡಲಾಗಿದೆ ಎಂದು ರಾಷ್ಟ್ರಪತಿಗಳ ಸಚಿವಾಲಯದ ಪತ್ರಿಕಾ ಪ್ರಕಟನೆ ತಿಳಿಸಿದೆ. 

ಹಿಂದೆ ನಜೀರ್‌ ಅಹ್ಮದ್‌ ವಾನಿ ಭಯೋತ್ಪಾದಕರಾಗಿದ್ದು  ಅನಂತರ ಉಗ್ರವಾದ ತ್ಯಜಿಸಿ ಸೇನೆಗೆ ಶರಣಾಗತರಾಗಿ ಸೇನೆಯಲ್ಲೇ  ಸೇವೆಗೆ ತೊಡಗಿಕೊಂಡು ಉಗ್ರರ ವಿರುದ್ಧ ಹೋರಾಡುವಲ್ಲಿ ಕಟಿಬದ್ಧತೆ, ಧೈರ್ಯ, ಶೌರ್ಯ ತೋರಿದವರು.

ಇವರು 2004ರಲ್ಲಿ ಪ್ರಾದೇಶಿಕ ಸೇನೆಯ 162ನೇ ಬೆಟಾಲಿಯನ್‌ಗೆ ಸೇರ್ಪಡೆಗೊಂಡಿದ್ದರು. 2018ರ ನವೆಂಬರ್‌ ನಲ್ಲಿ ಇವರು ಉಗ್ರರ ವಿರುದ್ಧ ಹೋರಾಡುತ್ತಾ ವೀರ ಮರಣವನ್ನಪ್ಪಿದರು. ಇವರು ಮೂಲತಃ ಕುಲಗಾಂವ್‌ ನಿವಾಸಿಯಾಗಿದ್ದು ಎರಡು ಬಾರಿ ಪ್ರತಿಷ್ಠಿತ ಸೇನಾ ಮೆಡಲ್‌ ಪಡೆದವರಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next