Advertisement

ಆ. 5ರಂದು ಮನೆಗಳಲ್ಲಿ ದೀಪ ಬೆಳಗಲಿ: ರಾಮಮಂದಿರ ಟ್ರಸ್ಟ್‌

01:48 PM Jul 30, 2020 | mahesh |

ಅಯೋಧ್ಯೆ: “ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್‌ 5ರಂದು ನಡೆಯುವ ಭೂಮಿಪೂಜೆ ಯಲ್ಲಿ ಭಾಗಿಯಾ ಗಲೆಂದು ದಯವಿಟ್ಟು ಯಾರೂ ಅಯೋಧ್ಯೆಗೆ ಬರಬೇಡಿ. ಮನೆಯಲ್ಲೇ ಇದ್ದು ಕೊಂಡು ದೀಪಗಳನ್ನು ಬೆಳಗಿ ಹಾಗೂ ಟಿವಿ ಮೂಲಕ ಭೂಮಿಪೂಜೆಯನ್ನು ಕಣ್ತುಂಬಿಕೊಳ್ಳಿ.’

Advertisement

ಇದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಬುಧವಾರ ಭಕ್ತರಲ್ಲಿ ಮಾಡಿರುವ ಮನವಿ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರು, ರಾಮ ಮಂದಿರ ಚಳವಳಿಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲರಿಗೂ ವಂದನೆಗಳು. ಭೂಮಿ ಪೂಜೆಯ ಐತಿಹಾಸಿಕ ದಿನದಂದು ಅಯೋಧ್ಯೆಯಲ್ಲಿ ಹಾಜರಿರಬೇಕು ಎಂಬ ಬಯಕೆ ಎಲ್ಲರಲ್ಲೂ ಸಹಜ. ಆದರೆ ಕೊರೊನಾದಿಂದಾಗಿ ಅದನ್ನು ಪೂರೈಸಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಅಂದು ಸಂಜೆ ನಿಮ್ಮ ಮನೆ ಗಳಲ್ಲಿ ದೀಪ ಬೆಳಗಿರಿ ಎಂದಿದ್ದಾರೆ. ಜತೆಗೆ ಅಂದು ಮಧ್ಯಾಹ್ನ 11.30ರಿಂದ 12.30ರ ವರೆಗೆ ದೇಗುಲಗಳು ಮತ್ತು ಮಠಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸುವಂತೆ ದೇಶಾದ್ಯಂತದ ಸಂತರಲ್ಲಿ ಮನವಿ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.

ಮಸೀದಿ ನಿರ್ಮಾಣಕ್ಕೆ ಟ್ರಸ್ಟ್‌
ಅಯೋಧ್ಯೆಯ 5 ಎಕರೆ ಪ್ರದೇಶದಲ್ಲಿ ಮಸೀದಿ ನಿರ್ಮಿಸುವ ಸಂಬಂಧ 15 ಸದಸ್ಯರ ಟ್ರಸ್ಟ್‌ ಸ್ಥಾಪಿಸಲಾಗಿದೆ. 9 ಮಂದಿಯ ಹೆಸ ರನ್ನು ಘೋಷಿಸಿದ್ದು, ಉಳಿದವರ ಹೆಸರನ್ನು ಸದಸ್ಯರೆಲ್ಲ ಸೇರಿ ನಿರ್ಣ ಯಿಸಲಿದ್ದಾರೆ ಎಂದು ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್‌ ಅಧ್ಯಕ್ಷ ಝುಫ‌ರ್‌ ಅಹ್ಮದ್‌ ಫಾರೂಕಿ ಬುಧ ವಾರ ತಿಳಿಸಿದ್ದಾರೆ.

ಟ್ರಸ್ಟ್‌ಗೆ ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ ಎಂದು ನಾಮಕರಣ ಮಾಡಲಾಗಿದೆ. ಧನ್ನಿಪುರಿ ಗ್ರಾಮದ 5 ಎಕರೆ ಪ್ರದೇಶದಲ್ಲಿ ಮಸೀದಿ, ಇಂಡೋ-ಇಸ್ಲಾಮಿಕ್‌ ಸಂಶೋಧನಾ ಕೇಂದ್ರ, ಗ್ರಂಥಾಲಯ ಹಾಗೂ ಆಸ್ಪತ್ರೆ ನಿರ್ಮಾಣದ ಹೊಣೆ ಯನ್ನು ಈ ಟ್ರಸ್ಟ್‌ ಹೊತ್ತು ಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಪವಿತ್ರ ಜಲ, ಮೃತ್ತಿಕೆ ಬಳಕೆ
ಭವ್ಯ ರಾಮಮಂದಿರವು ದೇಶದ ಪ್ರಮುಖ ದೇವಾಲಯಗಳ ಮೃತ್ತಿಕೆ ಹಾಗೂ ಪ್ರಮುಖ ನದಿಗಳ ಜಲವನ್ನು ಒಳಗೊಂಡಿರಲಿದೆ. ಭೂಮಿಪೂಜೆಗೆ ಮುನ್ನವೇ ಅವು ಅಯೋಧ್ಯೆ ತಲುಪಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next