ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಂದರ್ಭ ಕ್ರಿಕೆಟ್ ಅಡಿದ್ದು ಗೊತ್ತಿದೆ ಆದರೆ ಇದೀಗ ಮತ್ತೊಮ್ಮೆ ಪ್ರಚಾರದಲ್ಲಿದ್ದಾರೆ. ಆದರೆ ಈ ಬಾರಿ ಕೈಯಲ್ಲಿ ಬ್ಯಾಟ್ ಬದಲು ರಾಕೆಟ್ ಇದೆ.
ಹೌದು ಲಾಲು ಪ್ರಸಾದ್ ಯಾದವ್ ಬ್ಯಾಡ್ಮಿಂಟನ್ ಆಡುತ್ತಿರುವ ಚಿತ್ರವೊಂದು ಹೊರಬಿದ್ದಿದೆ. ಲಾಲು ಅವರ ಪುತ್ರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಲಾಲು ಬ್ಯಾಡ್ಮಿಂಟನ್ ಆಡುತ್ತಿರುವ ಚಿತ್ರ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ -ಫೋಟೋಗಳಲ್ಲಿ ಲಾಲು ಪ್ರಸಾದ್ ಯಾದವ್ ಬ್ಯಾಡ್ಮಿಂಟನ್ ಆಡುತ್ತಿರುವ ಚಿತ್ರಗಳನ್ನು ಕಾಣಬಹುದು ಇದನ್ನು ಕಂಡಾಗ ಲಾಲು ಪ್ರಸಾದ್ ಯಾದವ್ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ತೋರಿಸುತ್ತದೆ.
ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಲಾಲು ಪ್ರಸಾದ್ ಸಿಂಗಾಪುರಕ್ಕೆ ತೆರಳಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಲಾಲು ಪುತ್ರಿ ರೋಹಿಣಿ ಆಚಾರ್ಯ ಕಿಡ್ನಿ ದಾನ ಮಾಡಿದ್ದಾರೆ. ದೆಹಲಿಯಲ್ಲಿ ನೆಲೆಸಿರುವ ಲಾಲು ಸದ್ಯ ಪಾಟ್ನಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಸಮಯದಲ್ಲಿ ಅವರು ನಿರಂತರವಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರಿಗೆ ಕ್ರೀಡೆಯ ಬಗ್ಗೆ ಅಪಾರ ಪ್ರೀತಿ . ಲಾಲು ಪ್ರಸಾದ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಪಾಟ್ನಾದ ಮೊಯಿನುಲ್ ಹಕ್ ಸ್ಟೇಡಿಯಂನಲ್ಲಿ ಕೀನ್ಯಾ ಮತ್ತು ಜಿಂಬಾಬ್ವೆ ನಡುವೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ ನಡೆದಿತ್ತು. ಭಾರೀ ಮಳೆಯ ಪರಿಣಾಮ ಪಂದ್ಯ ನಡೆಯುವ ಬಗ್ಗೆ ಅನುಮಾನವಿತ್ತು, ಆಗ ಲಾಲು ಪ್ರಸಾದ್ ಯಾದವ್ ಹೆಲಿಕಾಪ್ಟರ್ ಮೂಲಕ ಇಡೀ ಮೈದಾನವನ್ನು ಒಣಗಿಸಲು ಸೂಚನೆ ನೀಡಿದ್ದರು. ಆ ಬಳಿಕ ಲಾಲು ಪ್ರಸಾದ್ ಯಾದವ್ ಬಿಹಾರ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದರು, ಈ ಸಮಯದಲ್ಲಿ ಅವರು ಕೈಯಲ್ಲಿ ಬ್ಯಾಟ್ ಹಿಡಿದ ಚಿತ್ರ ಭಾರಿ ಜನಪ್ರಿಯತೆ ಪಡೆದಿತ್ತು ಇದೀಗ ಕೈಯಲ್ಲಿ ರಾಕೆಟ್ ಹಿಡಿದು ಎಪ್ಪತ್ತಾರನೇ ವಯಸ್ಸಿನಲ್ಲೂ ನಾನು ಫಿಟ್ ಅಂಡ್ ಫೈನ್ ಆಗಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ.