Advertisement
ಲಾಲು ಪ್ರಸಾದ್ ಯಾದವ್‌ಗೆ ನೀಡಲಾಗಿದ್ದ ಎಲ್ಲ ಎನ್‌ಎಸ್‌ಜಿ ಕಮಾಂಡೋಗಳ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಗಿದ್ದು ಈಗಿನ್ನು ಸಿಆರ್‌ಪಿಎಫ್ ದಳ ಲಾಲು ಭದ್ರತೆಯ ಜವಾಬ್ದಾರಿ ನಿಭಾಯಿಸಲಿದೆ. ಇದು ಝಡ್ ಕೆಟಗರಿಯ ಭದ್ರತೆಯಾಗಲಿದ್ದು ಅದು ರಾಜ್ಯ ಪೊಲೀಸ್ ದಳದ ಹೊಣೆಗಾರಿಕೆಯಾಗಿರುತ್ತದೆ ಎಂದು ವರದಿಗಳು ತಿಳಿಸಿವೆ.
Related Articles
Advertisement
ಇದೇ ವೇಳೆ ಕೇಂದ್ರ ಗೃಹ ಸಚಿವಾಲಯ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್‌ರಾಮ್ ಮಾಂಜಿ ಅವರಿಗೆ ನೀಡಲಾಗಿದ್ದ ಝಡ್ ಪ್ಲಸ್ ಕೆಟಗರಿಯ ಭದ್ರತೆಯನ್ನು ಕೂಡ ಹಿಂದೆಗೆದುಕೊಂಡಿದೆ. ಮಾಂಜಿ ಅವರಿಗೆ ಝಡ್ ಪ್ಲಸ್ ಭದ್ರತೆ ಇರುತ್ತಾ ಸಿಆರ್‌ಪಿಎಫ್ ಭದ್ರತೆಯೂ ಜಾರಿಯಲ್ಲಿತ್ತು !
ಲಾಲು ಪುತ್ರ ತೇಜ್ ಪ್ರತಾಪ್ ನಿನ್ನೆ ಭಾನುವಾರ “ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಪುತ್ರನ ವಿವಾಹ ಕಾರ್ಯಕ್ರಮವನ್ನು ಹಾಳುಗೆಡಹುವ’ ಬೆದರಿಕೆಯನ್ನು ಹಾಕಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದ ತೇಜ್ ಪ್ರತಾಪ್, “ನಾನೇನೂ ಕ್ರಿಮಿನಲ್ ಅಥವಾ ಭಯೋತ್ಪಾದಕನಲ್ಲ’ ಎಂದು ಹೇಳಿ “ಸುಶೀಲ್ ಕುಮಾರ್ ಮೋದಿ ಅವರು ನಿರ್ಭಯರಾಗಿ ತಮ್ಮ ಮಗನ ಮದುವೆ ಕಾರ್ಯಕ್ರಮವನ್ನು ನಡೆಸಬಹುದಾಗಿದೆ’ ಎಂದು ಹೇಳಿದ್ದರು.
ತೇಜ್ ಪ್ರತಾಪ್ ಯಾದವ್ ಹಾಕಿದ್ದರು ಎನ್ನಲಾದ ಬೆದರಿಕೆಯ ಹಿನ್ನೆಲೆಯಲ್ಲಿ “ಭದ್ರತೆಯ ಕಾರಣಗಳಿಗೆ ಡಿ.3ರಂದು ರಾಜೇಂದ್ರ ನಗರದಲ್ಲಿನ ಶಾಖಾ ಮೈದಾನದಲ್ಲಿ ನಡೆಯಲು ತೀರ್ಮಾನಿಸಲಾಗಿದ್ದ ಪುತ್ರನ ಮದುವೆಯನ್ನು ಇದೀಗ ನಾವು ಪಟ್ನಾ ವಿಮಾನ ನಿಲ್ದಾಣ ಸಮೀಪದ ವೆಟೆರಿನರಿ ಕಾಲೇಜ್ ಗ್ರೌಂಡ್ ತಾಣಕ್ಕೆ ಬದಲಾಯಿಸಿದ್ದೇವೆ’ ಎಂದು ಹೇಳಿದ್ದರು.