ಪಾಟ್ನಾ: ಬಿಹಾರ ಚುನಾವಣೆಗಾಗಿ ವೇದಿಕೆ ಸಜ್ಜುಗೊಂಡಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ನಡೆದಿದೆ. ಪ್ರತಿಪಕ್ಷ ಆರ್‌ಜೆಡಿಯ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರು ರಾಂಚಿಯಲ್ಲಿರುವ ರಾಂಚಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯ ವಾರ್ಡ್‌ನಿಂದಲೇ ಅಭ್ಯರ್ಥಿಗಳ ಆಯ್ಕೆಗೆ ಸಂದರ್ಶನ ನಡೆಸುತ್ತಿದ್ದಾರೆ.
ಆ.5ರಂದು ಯಾದವ್ ಅವರನ್ನು ಆಸ್ಪತ್ರೆಯ ನಿರ್ದೇಶಕರ ಬಂಗಲೆಗೆ ಕರೆದೊಯ್ಯಲಾಗುತ್ತಿತ್ತು. ಅಲ್ಲಿಂದಲೇ ಸಂದರ್ಶನ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗಮನಾರ್ಹ ಅಂಶವೆಂದರೆ ಲಾಲು ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಕಾರಾಗೃಹದಲ್ಲಿರುವವರಿಗೆ ಮೊಬೈಲ್ ಬಳಕೆ ನಿಷೇಧ. ಲಾಲುಗೆ ಸೌಲಭ್ಯ ಹೇಗೆ ಸಿಕ್ಕಿತು ಎನ್ನುವುದೇ ಚರ್ಚೆಯ ವಿಚಾರವಾಗಿದೆ. ಮಾಜಿ ಸಿಎಂ ರಘುವರ ದಾಸ್ ಇದು ಕಾನೂನು, ಸುವ್ಯವಸ್ಥೆಯ ಅಣಕ ಎಂದು ದೂರಿದ್ದಾರೆ.
ಇದನ್ನೂ ಓದಿ:ಅಧಿಕೃತ ನಿವಾಸಕ್ಕೆ ರಾಮ್ ವಿಲಾಸ್ ಪಾಸ್ವಾನ್ ಪಾರ್ಥೀವ ಶರೀರ: ಅಂತಿಮದರ್ಶನ ಪಡೆದ ರಾಷ್ಟ್ರಪತಿ
ಪಾಂಡೆಗಿಲ್ಲ ಟಿಕೆಟ್: ಬಿಹಾರ ಡಿಜಿಪಿ ಹುದ್ದೆ ತೊರೆದು ಶಾಸಕನಾಗುವ ಕನಸು ಕಂಡಿದ್ದ ಗುಪ್ತೇಶ್ವರ ಪಾಂಡೆಗೆ ನಿರಾಸೆಯಾಗಿದೆ. ಬುಧವಾರ ಪ್ರಕಟವಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಕಂಡು ಬಂದಿಲ್ಲ.