Advertisement

3 ದಿನದ ಪೆರೋಲ್‌ :ಲಾಲು ನಡೆ-ನುಡಿ ವಿಡಿಯೋ,ಮಾಧ್ಯಮದೊಂದಿಗೆ ಮಾತಿಲ್ಲ

04:29 PM May 10, 2018 | Team Udayavani |

ಪಟ್ನಾ : ತನ್ನ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಮದುವೆಗೆ ಮೂರು ದಿನಗಳ ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಎಲ್ಲ ಚಲನವಲನಗಳನ್ನು ಈ ಮೂರು ದಿನಗಳಲ್ಲಿ  ವಿಡಿಯೋದಲ್ಲಿ  ದಾಖಲಿಸಲಾಗುವುದೆಂದು ಜೈಲಿನ ಐಜಿಪಿ ಹರ್ಷ್‌ ಮಂಗಳ ಅವರು ತಿಳಿಸಿದ್ದಾರೆ. ಅಂತೆಯೇ ಈ ಮೂರು ದಿನಗಳ ಅವಧಿಯಲ್ಲಿ ಲಾಲು ಮಾಧ್ಯಮದೊಂದಿಗೆ ಮಾತನಾಡುವಂತಿಲ್ಲ ಎಂಬ ನಿರ್ಬಂಧ ಹೇರಲಾಗಿದೆ. 

Advertisement

ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗ ಪ್ರಸಾದ್‌ ರಾಯ್‌ ಅವರ ಮೊಮ್ಮಗಳು ಐಶ್ವರ್ಯಾ ರಾಯ್‌ ಜತೆಗೆ ಲಾಲು ಹಿರಿಯ ಪುತ್ರನ ಮದುವೆ ಇದೇ ಮೇ 12ರಂದು ನಡೆಯಲಿದೆ. 

ಈ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳಲು, ಬಹುಕೋಟಿ ಮೇವು ಹಗರಣದಲ್ಲಿ ಜೈಲುಪಾಲಾಗಿರುವ ಲಾಲುಗೆ ಮೂರು ದಿನಗಳ ಪೆರೋಲ್‌ ಸಿಕ್ಕಿದೆ. ಅಂತೆಯೇ ಇಂದು ಗುರುವಾರ ಸಂಜೆ ಲಾಲು ಅವರು ರಾಂಚಿಯಿಂದ ವಿಮಾನ ಮೂಲಕ ಬಿಹಾರ ರಾಜಧಾನಿ ಪಟ್ನಾಗೆ ಪ್ರಯಾಣ ಬೆಳೆಸಲಿದ್ದಾರೆ. 

ಈ ನಡುವೆ ರಾಂಚಿಯಿಂದ ಒಂದು ಪೊಲೀಸ್‌ ತಂಡವನ್ನು ಈಗಾಗಲೇ ಪಟ್ನಾಕ್ಕೆ ಕಳುಹಿಸಲಾಗಿದೆ ಎದು ಜೈಲಿನ ಐಜಿಪಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next