Advertisement

ಜೈಲುವಾಸಿಯಾದ್ರೂ ಆರ್‌ಜೆಡಿಗೆ ಲಾಲೂವೇ ಅಧ್ಯಕ್ಷ

09:46 AM Dec 04, 2019 | Hari Prasad |

ಪಟನಾ: ಮೇವು ಹಗರಣದ ಅಪರಾಧಿ, ಆರ್‌ಜೆಡಿ ನೇತಾರ ಲಾಲೂ ಪ್ರಸಾದ್‌ ಯಾದವ್‌ ಈಗ ಜೈಲು ಕಂಬಿ ಎಣಿಸುತ್ತಿದ್ದರೂ, ಆರ್‌ಜೆಡಿಯ ಅಧ್ಯಕ್ಷರಾಗಿ 11ನೇ ಬಾರಿಗೆ ಆಯ್ಕೆಯಾಗಿದ್ದಾರೆ.

Advertisement

ಕುಖ್ಯಾತ ಮೇವು ಹಗರಣದಲ್ಲಿ ಅವರು 7 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು, ಬಿಹಾರದ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ 2017 ಡಿ.23ರಿಂದ ಇದ್ದರು. 2018 ಆಗಸ್ಟ್‌ನಲ್ಲಿ ಅನಾರೋಗ್ಯ ನಿಮಿತ್ತ ರಾಂಚಿಯ ಆರ್‌ಐಎಮ್‌ಎಸ್‌ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಇದೇ ಪ್ರಕರಣದಲ್ಲಿ ಅವರಿಗೆ ಕೋರ್ಟ್‌ 60 ಲಕ್ಷ ರೂ. ದಂಡ ವಿಧಿಸಿತ್ತು.

ಮಂಗಳವಾರ ಆರ್‌ಜೆಡಿ ಉನ್ನತಮಟ್ಟದ ಸಭೆ ನಡೆದಿದ್ದು, ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next