Advertisement

ಏಮ್ಸ್‌ ನಿಂದ ರಾಂಚಿ ಆಸ್ಪತ್ರೆಗೆ ಲಾಲು ವಾಪಸ್‌, ಮುಗಿಸುವ ಸಂಚು: ಆರೋಪ

03:46 PM Apr 30, 2018 | udayavani editorial |

ಹೊಸದಿಲ್ಲಿ : ಹೃದಯ ಮತ್ತು ಮೂತ್ರಪಿಂಡದ ತೊಂದರೆಗಳಿಗೆ ಇಲ್ಲಿನ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರನ್ನು ಬಿಡುಗಡೆ ಮಾಡಲಾಗಿದೆ. 

Advertisement

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಅವರನ್ನು ಈಗಿನ್ನು ರಾಂಚಿಯಲ್ಲಿನ ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸೆಯನ್ನು ಮುಂದುವರಿಸಲಾಗುವುದು. 

ಆದರೆ ಜಾರ್ಖಂಡ್‌ ರಾಜಧಾನಿ ರಾಂಚಿ ಆಸ್ಪತ್ರೆಯಲ್ಲಿ ನನ್ನ ಚಿಕಿತ್ಸೆಗೆ ಯೋಗ್ಯ ವೈದ್ಯಕೀಯ ಸೌಕರ್ಯಗಳು ಇಲ್ಲದಿರುವುದರಿಂದ ಅಲ್ಲಿಗೆ ನನ್ನನ್ನು ವರ್ಗಾಯಿಸುವುದು ನನ್ನನ್ನು ಮುಗಿಸಿ ಬಿಡುವ ಸಂಚಾಗಿದೆ ಎಂದು ಲಾಲು ಆರೋಪಿಸಿದ್ದಾರೆ.

ಲಾಲು ಅವರನ್ನು ರಾಂಚಿ ಆಸ್ಪತ್ರೆಗೆ ವರ್ಗಾಯಿಸುವುದನ್ನು ವಿರೋಧಿಸಿ ದಿಲ್ಲಿಯ ಏಮ್ಸ್‌ ಆಸ್ಪತ್ರೆಯ ಮುಂದೆ ಇಂದು ಆರ್‌ಜೆಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಲಾಲು ಯಾದವ್‌ ಅವರು ಬಹುಕೋಟಿ ಮೇವು ಹಗರಣದ ನಾಲ್ಕು ಕೇಸುಗಳಲ್ಲಿ ಅಪರಾಧಿ ಎಂದು ಕೋರ್ಟಿನಿಂದ ಪರಿಗಣಿಸಲ್ಪಟ್ಟು  ಪ್ರಕೃತ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. 

Advertisement

ಏಮ್ಸ್‌ ಆಸ್ಪತ್ರೆ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ಹೀಗೆ ಹೇಳಿದೆ: “ಲಾಲು ಪ್ರಸಾದ್‌ ಯಾದವ್‌ ಅವರನ್ನು ಹದಗೆಟ್ಟ ಅವರ ಆರೋಗ್ಯ ಸುಧಾರಣೆಗಾಗಿ ಏಮ್ಸ್‌ಗೆ ಉಲ್ಲೇಖೀಸಲಾಗಿತ್ತು. ಅವರ ಆರೋಗ್ಯ ಈಗ ಗಮನಾರ್ಹವಾಗಿ ಸುಧಾರಿಸಿರುವುದರಿಂದ ಅವರನ್ನು ಮತ್ತೆ ರಾಂಚಿ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ’. 

ಇದಕ್ಕೆ ಉತ್ತರವಾಗಿ ಲಾಲು ಅವರು ಏಮ್ಸ್‌ ಆಡಳಿತೆಗೆ ಬರೆದಿರುವ ಪತ್ರದಲ್ಲಿ, “ನಾನು ರಾಂಚಿ ಆಸ್ಪತ್ರೆಗೆ ವರ್ಗಾಯಿಸಲ್ಪಡುವುದನ್ನು ಬಯಸುವುದಿಲ್ಲ. ರಾಂಚಿ ಆಸ್ಪತ್ರೆಯಲ್ಲಿ ನನಗೆ ಅವಶ್ಯವಿರುವ ವೈದ್ಯಕೀಯ ಚಿಕಿತ್ಸೆಯ ಸೌಕರ್ಯಘಲು ಇಲ್ಲ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next