ವಿಜಯಪುರ: ನಗರದ ಮೈಸೂರ್ ರೆಸ್ಟೊರೆಂಟ್, ಲಲಿತ್ ಮಹಲ್ ಮತ್ತಿತರ ಹೋಟೆಲ್ ಉದ್ದಿಮೆಗಳ ಒಡೆಯರಾದ ಶೆಟ್ಟಿ ಕುಟುಂಬದ ಹಿರಿಯರಾದ ಲಲಿತಾ ಬಾಬುರಾವ್ ಶೆಟ್ಟಿ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಮೂಲದ ಲಲಿತ ಅವರು ವಿಜಯಪುರದಲ್ಲಿ ನೆಲೆಸಿದ್ದ ಕಾರ್ಕಳ ಬಜಗೋಳಿ ಮೂಲದ ಹೊಟೇಲ್ ಉದ್ಯಮಿ ಬಾಬುರಾವ್ ಶೆಟ್ಟಿ ಅವರೊಂದಿಗೆ ವಿವಾಹವಾಗಿ ವಿಜಯಪುರದಲ್ಲಿ ನೆಲೆಸಿದ್ದರು.
ಮೃತರು ಪುತ್ರರಾದ ವೂಡಾ ಮಾಜಿ ಅಧ್ಯಕ್ಷ ಚಂದ್ರಕಾಂತ, ನಾಗೇಶ, ಶರತ, ಶ್ರೀಕಾಂತ್ 4 ಜನ ಪುತ್ರರು,5 ಜನ ಪುತ್ರಿಯರು, ಅಳಿಯಂದಿರಲ್ಲಿ ಖ್ಯಾತ ಪರಿಸರ ಹೋರಾಟಗಾರ ವಿಜಯಕುಮಾರ್ ಹೆಗ್ಡೆ, ಉಡುಪಿ ಖ್ಯಾತ ಕಂಟ್ರ್ಯಾಕ್ಟರ ಸುರೇಂದ್ರ ಶೆಟ್ಟಿ, ಹೊಟೇಲ್ ಉದ್ಯಮಿ ದಯಾನಂದ ಶೆಟ್ಟಿ, ಮಣಿಪಾಲ ಆಸ್ಪತ್ರೆಯ ಮೆಡಿಕಲ್ ಸುಪರಿಟೆಂಡೆಂಟ್ ಡಾ.ಅವಿನಾಶ ಶೆಟ್ಟಿ ಮತ್ತು ಸಾಫ್ಟ್ ವೇರ್ ಎಂಜಿನಿಯರ್ ಪ್ರದೀಪ ಶೆಟ್ಟಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇದನ್ನೂ ಓದಿ:ಕೊರೊನಮ್ಮ ದೇವಿಗೆ ವಿಶೇಷ ಪೂಜೆ, ಕುರಿ-ಕೋಳಿ ಬಲಿ; ಪೂಜೆ ಹೆಸರಲ್ಲಿ ಮಾಸ್ಕ್ ಮರೆತ ಜನ
ಮೃತರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 12.30 ಗಂಟೆಗೆ ವಿಜಯಪುರ ನಗರದಲ್ಲಿ ಜರುಗಲಿದೆ.
ಸಂತಾಪ : ಲಲಿತಾ ಅವರ ನಿಧನಕ್ಕೆ ಮಾಜಿ ಸಚಿವ ಎಂ.ಬಿ ಪಾಟೀಲ, ಶಾಸಕ ಸುನೀಲ್ ಗೌಡ ಪಾಟೀಲ, ಮಾಜಿ ಶಾಸಕ ಪ್ರೊ. ರಾಜು ಆಲಗೂರ ಸೇರಿದಂತೆ ವಿವಿಧ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.