Advertisement

`ಸಂಗೀತ ಪರಂಪರೆಗೆ ಲಾಲ್ಗುಡಿ ದೊಡ್ಡ  ಆಸ್ತಿ’

04:55 PM Sep 19, 2017 | |

ಉಡುಪಿ: ಶಾಸ್ತ್ರಬದ್ಧವಾದ ಸಂಗೀತದಿಂದ ಕಲಾರಸಿಕರ ಮನಗೆದ್ದ ಲಾಲ್ಗುಡಿ ಜಯರಾಮನ್‌ ಸಂಗೀತ ಪರಂಪರೆಗೆ ದೊಡ್ಡ ಆಸ್ತಿ ಎಂದು ಹಿರಿಯ ಪತ್ರಕರ್ತ, ಕಲಾವಿಮರ್ಶಕ ಈಶ್ವರಯ್ಯ ಹೇಳಿದರು.

Advertisement

ಅವರು ಸೆ. 17ರಂದು ಎಂಜಿಎಂ ನೂತನ ರವೀಂದ್ರ ಮಂಟಪದಲ್ಲಿ ಜರಗಿದ ನಿನಾದ ಮ್ಯೂಸಿಕ್‌ ಅಕಾಡೆಮಿಯ ದಶ ಮಾನೋತ್ಸವ ಹಾಗೂ ಲಾಲ್ಗುಡಿ ಅವರ 87ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಂಜಿಎಂ ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್‌ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿದ್ವಾನ್‌ ಹೊಸಹಳ್ಳಿ ಕೆ. ವೆಂಕಟರಾಮ್‌ ಅವರನ್ನು ಗೌರವಿಸಲಾಯಿತು. ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌ನ ಕ್ಷೇತ್ರೀಯ ಮಹಾ ಪ್ರಬಂಧಕ ಕಚೇರಿಯ ಹಿರಿಯ ಅಧಿಕಾರಿ ಸತೀಶ್‌ ಕಾಮತ್‌,  ಕಲಾವಿದರಾದ ಮದೂರು ಬಾಲಸುಬ್ರಹ್ಮಣ್ಯಂ, ನಿನಾದದ ವಿದ್ಯಾನ್‌ ರವಿ ಕುಮಾರ್‌ ಮೈಸೂರು ಮತ್ತಿತರರು ಉಪಸ್ಥಿತರಿದ್ದರು. ನಿನಾದ ಅಕಾಡೆಮಿಯ ಕಾರ್ಯದರ್ಶಿ ಶ್ರೇಷ್ಠಾ ಕಾರ್ಯಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next