Advertisement

ನಾಲ್ಕು ಗಂಟೆಗಳಲ್ಲಿ ನೂರು ಪ್ರಶ್ನೆಗಳು ; ಆರೋಪ ಅಲ್ಲಗಳೆದ ಎಲ್‌.ಕೆ. ಆಡ್ವಾಣಿ

03:37 AM Jul 25, 2020 | Hari Prasad |

ಲಕ್ನೋ/ಅಲಹಾಬಾದ್‌: ವಿವಾದಿತ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಅವರ ಹೇಳಿಕೆಯನ್ನು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ದಾಖಲಿಸಿಕೊಂಡಿದೆ.

Advertisement

ಇತರೆ ಆರೋಪಿಗಳಂತೆಯೇ, 92 ವರ್ಷದ ಆಡ್ವಾಣಿ ಅವರೂ ವೀಡಿಯೋ ಲಿಂಕ್‌ ಮೂಲಕ ಕೋರ್ಟ್‌ ಕಲಾಪದಲ್ಲಿ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

ಬರೋಬ್ಬರಿ 4.5 ಗಂಟೆಗಳ ಕಾಲ ಅಂದರೆ ಬೆಳಗ್ಗೆ 11ರಿಂದ ಸಂಜೆ 3.30ರವರೆಗೆ ವಿಚಾರಣೆ ನಡೆದಿದ್ದು, ಆಡ್ವಾಣಿ ಅವರಿಗೆ 100 ಪ್ರಶ್ನೆಗಳನ್ನು ನ್ಯಾಯಾಲಯ ಕೇಳಿದೆ.

ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನೂ ಆಡ್ವಾಣಿ ಅವರು ಅಲ್ಲಗಳೆದಿದ್ದಾರೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಈ ಪ್ರಕರಣಕ್ಕೆ ಸಂಬಂಧಿಸಿ ದಿನಂಪ್ರತಿ ವಿಚಾರಣೆ ನಡೆಯುತ್ತಿದ್ದು, ಆಗಸ್ಟ್‌ 31ರೊಳಗಾಗಿ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ.

Advertisement

ಎಲ್ಲ 32 ಆರೋಪಿಗಳ ಹೇಳಿಕೆಗಳನ್ನೂ ಕೋರ್ಟ್‌ ದಾಖಲಿಸಿಕೊಳ್ಳುತ್ತಿದೆ. ಗುರುವಾರವಷ್ಟೇ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಅವರ ಹೇಳಿಕೆ ದಾಖಲಿಸಲಾಗಿತ್ತು.

ತಡೆಕೋರಿದ್ದ ಪಿಐಎಲ್‌ ವಜಾ ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿಪೂಜೆಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ.
ಸೋಂಕು ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಆ. 5ರಂದು ನಡೆಯುವ ಭೂಮಿ ಪೂಜೆಗೆ ಸುಮಾರು 300 ಮಂದಿಯನ್ನು ಆಹ್ವಾನಿಸಲಾಗಿದೆ. ಏಕಕಾಲಕ್ಕೆ ಒಂದೇ ಸ್ಥಳದಲ್ಲಿ ಇಷ್ಟೊಂದು ಜನ ಸೇರುವುದು ಕೇಂದ್ರ ಸರಕಾರದ ಮಾರ್ಗಸೂಚಿಯ ಉಲ್ಲಂಘನೆಯಾಗುತ್ತದೆ. ಭೂಮಿಪೂಜೆ ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಆರೆಸ್ಸೆಸ್‌ ಪ್ರಧಾನ ಕಚೇರಿ ಮಣ್ಣು ಅಯೋಧ್ಯೆಗೆ
ನಾಗ್ಪುರದಲ್ಲಿರುವ ಆರೆಸ್ಸೆಸ್‌ ಪ್ರಧಾನ ಕಚೇರಿಯ ಮಣ್ಣನ್ನೂ ಆಗಸ್ಟ್‌ 5ರ ಭೂಮಿಪೂಜೆಗೆಂದು ಅಯೋಧ್ಯೆಗೆ ರವಾನಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ಪದಾಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಜತೆಗೆ, ನಾಗ್ಪುರ ನಗರದ ಸಮೀಪದಲ್ಲೇ ಇರುವ ರಾಮ್‌ಟೆಕ್‌ನ ರಾಮಮಂದಿರದ ಮಣ್ಣು ಹಾಗೂ 5 ನದಿಗಳ ಸಂಗಮ ಸ್ಥಾನದಲ್ಲಿನ ನೀರನ್ನು ಕೂಡ ಕೊರಿಯರ್‌ ಮೂಲಕ ಕಳುಹಿಸಲಾಗಿದೆ ಎಂದೂ ವಿಎಚ್‌ಪಿ ವಿದರ್ಭ ಪ್ರಾಂತ್ಯದ ಪ್ರಮುಖ್‌ ಗೋವಿಂದ್‌ ಶೆಂಡೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next