Advertisement

ಲಕ್ಷ್ಯ ಸೇನ್‌ಗೆ ಒಲಿಯಿತು ವರ್ಷದ 5ನೇ ಬ್ಯಾಡ್ಮಿಂಟನ್‌ ಪ್ರಶಸ್ತಿ

10:03 AM Dec 16, 2019 | sudhir |

ಢಾಕಾ: ಭಾರತದ ಪ್ರತಿಭಾನ್ವಿತ ಆಟಗಾರ ಲಕ್ಷ್ಯ ಸೇನ್‌ “ಬಾಂಗ್ಲಾದೇಶ್‌ ಇಂಟರ್‌ನ್ಯಾಶನಲ್‌ ಚಾಲೆಂಜರ್‌’ ಬ್ಯಾಡ್ಮಿಂಟನ್‌ ಕೂಟದ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಇದು 2019ರ 7 ಕೂಟಗಳಲ್ಲಿ ಸೇನ್‌ ಪಾಲಾದ 5ನೇ ಪ್ರಶಸ್ತಿ ಎಂಬುದು ವಿಶೇಷ.

Advertisement

18ರ ಹರೆಯದ ಲಕ್ಷ್ಯ ಸೇನ್‌ ರವಿವಾರದ ಫೈನಲ್‌ನಲ್ಲಿ ಮಲೇಶ್ಯದ ಲಿಯಾಂಗ್‌ ಜುನ್‌ ಹಾವೊ ವಿರುದ್ಧ 22-20, 21-18 ನೇರ ಗೇಮ್‌ಗಳ ಜಯ ಸಾಧಿಸಿದರು.
“ಗೆಲುವಿನೊಂದಿಗೆ ವರ್ಷ ಮುಗಿಸಿದ್ದಕ್ಕೆ ಬಹಳ ಖುಷಿಯಾಗಿದೆ.

ಬಾಂಗ್ಲಾದೇಶದಲ್ಲಿ ವರ್ಷದ 5ನೇ ಪ್ರಶಸ್ತಿ ಒಲಿದಿದೆ. 2020ರಲ್ಲೂ ಇದೇ ಫಾರ್ಮ್ ಮತ್ತು ಅದೃಷ್ಟ ಮುಂದುವರಿದೀತೆಂಬ ವಿಶ್ವಾಸ ಹೊಂದಿದ್ದೇನೆ’ ಎಂದು ಸೇನ್‌ ಹೇಳಿದ್ದಾರೆ.

ಇದೇ ಕೂಟದ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಭಾರತದ ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ ಮಲೇಶ್ಯದ ಯೀ ಜುನ್‌ ಚಾಂಗ್‌-ಕೈ ವುನ್‌ ಟೀ ವಿರುದ್ಧ 19-21, 16-21 ಅಂತರದಿಂದ ಪರಾಭವಗೊಂಡರು.

ವನಿತಾ ಡಬಲ್ಸ್‌ ಫೈನಲ್‌ನಲ್ಲಿ ಮನೀಷಾ ಕೆ.-
ಋತುಪರ್ಣಾ ಪಂಡಾ ಮಲೇಶ್ಯದ ಅಗ್ರ ಶ್ರೇಯಾಂಕಿತ ಟಾನ್‌ ಪರ್ಲಿ ಕೂಂಗ್‌ ಲೀ-ತಿನಾಹ್‌ ಮುರಳೀಧರನ್‌ ವಿರುದ್ಧ 20-22, 19-21 ಅಂಕಗಳಿಂದ ಸೋತು ರನ್ನರ್ ಅಪ್‌ಗೆ ಸಮಾಧಾನಪಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next