Advertisement

77ರಲ್ಲಿ ಇಂದಿರಾ ಬಂಧಿಸಿದ್ದ ಲಕ್ಷ್ಮೀನಾರಾಯಣನ್‌ ನಿಧನ

12:44 AM Jun 24, 2019 | Team Udayavani |

ಹೊಸದಿಲ್ಲಿ: 1977ರಲ್ಲಿ ಕೇಂದ್ರ ಸರಕಾರದ ಆದೇಶದ ಮೇರೆಗೆ ಅಂದಿನ ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಬಂಧಿಸಿದ್ದ ಹೆಗ್ಗಳಿಕೆ ಹೊಂದಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ವಿ.ಆರ್‌. ಲಕ್ಷ್ಮೀನಾರಾಯಣನ್‌ (91) ನಿಧನರಾಗಿದ್ದಾರೆ.

Advertisement

ಅವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿವೃತ್ತಿಯ ವೇಳೆ ಅವರು ತಮಿಳುನಾಡಿನ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದರು.

1975ರಿಂದ 1977ರವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯ ಅನಂತರ ನಡೆದ ಮಹಾ ಚುನಾವಣೆಯಲ್ಲಿ ಇಂದಿರಾಗಾಂಧಿಯವರ ಕಾಂಗ್ರೆಸ್‌ ಸರಕಾರ ಉರುಳಿ, ಜನತಾ ಸರಕಾರ ಅಧಿಕಾರಕ್ಕೆ ಬಂದಿತ್ತು. ಆಗ ಪ್ರಧಾನಿಯಾಗಿದ್ದ ಮುರಾರ್ಜಿ ದೇಸಾಯಿ , ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಂದಿರಾ ಅವರನ್ನು ಬಂಧಿಸಲು ಆದೇಶಿಸಿದ್ದರು. ಆಗ ಲಕ್ಷ್ಮೀನಾರಾಯಣನ್‌ ಸಿಬಿಐನ ಜಂಟಿ ನಿರ್ದೇಶಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next