Advertisement

ದೀಪ ಸಂಜೀವಿನಿ ಕಾರ್ಯಕ್ರಮಕ್ಕೆ ತಾಪಂ ಇಒ ಲಕ್ಷ್ಮೀದೇವಿ ಚಾಲನೆ

04:39 PM Oct 29, 2021 | Team Udayavani |

ಲಿಂಗಸುಗೂರು: ಗುಡಿ ಕೈಗಾರಿಕೆ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರು ಪ್ರೋತ್ಸಾಹ ನೀಡಬೇಕಾಗಿದೆ. ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಅವಕಾಶವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಾಗ ಸ್ವ ಉದ್ಯೋಗಿನಿಯಾಗಲು ಸಾಧ್ಯ ಎಂದು ತಾಪಂ ಇಒ ಲಕ್ಷ್ಮೀದೇವಿ ಹೇಳಿದರು.

Advertisement

ತಾಪಂ ಆವರಣದಲ್ಲಿ ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಎನ್‌ಆರ್‌ಎಲ್‌ ಎಂ ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಅಡಿಯಲ್ಲಿ ಆಯೋಜಿಸಿದ್ದ ದೀಪ ಸಂಜೀವಿನಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೀಪ ಮಾರಾಟದಿಂದ ಗಳಿಸುವ ಹಣವೂ ಗ್ರಾಮೀಣ ಪ್ರದೇಶದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ಶುಭ ಸಮಾರಂಭಗಳಲ್ಲಿ ದೀಪಗಳನ್ನು ಬಳಕೆ ಮಾಡುವುದರ ಜೊತೆಗೆ ದೀಪಾವಳಿ ಹಬ್ಬ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಬಳಕೆ ಯಾಗುತ್ತದೆ. ಸ್ವ-ಸಹಾಯ ಸಂಘಗಳ ಸದಸ್ಯರು ಉತ್ಪಾದಿಸುವ ದೀಪಗಳು ಕಡಿಮೆ ದರದಲ್ಲಿ ದೊರಕುವುದರಿಂದ ಸಾರ್ವಜನಿಕರು ಖರೀದಿಸಲು ಮುಂದೆ ಬರಬೇಕೆಂದರು.

ಈ ಸಂದರ್ಭದಲ್ಲಿ ಸಿಡಿಪಿಒ ಶರಣಮ್ಮ ಕಾರನೂರು, ಎನ್‌ ಆರ್‌ಎಲ್‌ಎಂ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ್‌ ಬನ್ನಿಗೋಳ, ತಾಲೂಕು ಯೋಜನಾ ವ್ಯವಸ್ಥಾಪಕ ರಮೇಶ್‌, ಕ್ಲಸ್ಟರ್‌ ಮೇಲ್ವಿಚಾರಕ ರಾಘವೇಂದ್ರ, ಹೊನ್ನಮ್ಮ, ಗದ್ದೇಮ ದೇವಿ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next