Advertisement

ಮತ ಖರೀದಿಗೆ ಹಣ ಹಂಚಿದ ಲಕ್ಷ್ಮೀ ಹೆಬ್ಟಾಳ್ಕರ್‌ ಬಂಧಿಸಿ: ಶೋಭಾ

03:45 AM Apr 07, 2017 | Harsha Rao |

ನಂಜನಗೂಡು: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ ಖರೀದಿಗೆ ಇಳಿದಿದೆ ಎನ್ನುವುದಕ್ಕೆ ಆ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಹಣ ಹಂಚುತ್ತಿರುವುದೇ ಸಾಕ್ಷಿಯಾಗಿದೆ ಎಂದ ಸಂಸದೆ ಶೋಭಾ ಕರಂದ್ಲಾಜೆ ದೂರಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳು ತಕ್ಷಣ ಆಕೆಯನ್ನು ಬಂಧಿಸಬೇಕು. ಆ ಮೂಲಕ ಚುನಾವಣೆಯನ್ನು ಪಾರದರ್ಶಕವಾಗಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪಕ್ಷ ವ್ಯಾಪಕವಾಗಿ ಮತ ಖರೀದಿಗಿಳಿದಿದೆ. ಅಧಿಕಾರಿಗಳು ಆಡಳಿತ ಪಕ್ಷದವರೊಂದಿಗೆ ಶಾಮಿಲಾಗಿದ್ದಾರೆ. ಎಲ್ಲೆಡೆ ಹಣ ಹಂಚಿಕೆ ನಡೆದಿದ್ದು, ದೇವರಸನಹಳ್ಳಿಯಲ್ಲಿ ಕಾಂಗ್ರೆಸ್‌ ಪಕ್ಷದ ಸೇವಾದಳದ ಕಾರ್ಯಕರ್ತರು ಸೀರೆ ಹಂಚುವಾಗ ಸೀರೆ ಸಹಿತವಾಗಿ ಸಿಕ್ಕಿಬಿದ್ದಿದ್ದಾರೆ. ಕುರಹಟ್ಟಿಯಲ್ಲಿ ಹಣ ಹಂಚುತ್ತಿದ್ದ ಕಾಂಗ್ರೆಸ್‌ ಮುಖಂಡರನ್ನು ಬಂಧಿಸಿದ ಪೊಲೀಸರು ಆತನನ್ನು ಹಾಗೆಯೇ ಬಿಡಲು ಕಾರಣವೇನು ಎಂದು ಅವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next