Advertisement

ಲಕ್ಷ್ಮೀ ವೆಂಕಟೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

01:27 PM Jan 23, 2018 | |

ಬಸವಕಲ್ಯಾಣ: ನಗರದ ಲಕ್ಷ್ಮೀ ವೆಂಕಟೇಶ ಸಂಸ್ಥಾನದ ವಾರ್ಷಿಕೋತ್ಸವ ನಿಮಿತ್ತ ಸಂಸ್ಥಾನದಲ್ಲಿ ವೆಂಕಟೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

Advertisement

ತಿರುಮಲಾದ ಶ್ರೀ ಮಹಂತ ಅರ್ಜುನದಾಸಜಿ ಮಹಾರಾಜ, ನಾಸಿಕನ ಶ್ರೀ ಅನಿಕೇತಾನಂದ ಶಾಸ್ತ್ರೀ ಮಹಾರಾಜ, ತಿರುಪತಿ ದೇವಸ್ಥಾನದ ಮುಖ್ಯ ಅರ್ಚಕ ಶ್ರೀ ರಂಗನಾಥ ಸ್ವಾಮಿ ನೇತೃತ್ವದಲ್ಲಿ ವೇದ ಮಂತ್ರ ಘೋಷಣೆಗಳ ಮಧ್ಯೆ ಮೂರ್ತಿ ಪ್ರಾಣ ಪ್ರತಿಷ್ಠಾನ ನೆರವೇರಿಸಲಾಯಿತು. ಉಸ್ಮಾನಾಬಾದ ಜಿಲ್ಲೆಯ ಶ್ರೀ ಅಪ್ಪ ಮಹಾರಾಜ
ಹಾಗೂ ಶ್ರೀಗಳು ಭಾಗವಹಿಸಿದ್ದರು. 

ನಗರ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗವಹಿಸಿ ದರ್ಶನ ಪಡೆದರು. ಇದಕ್ಕೂ ಮುನ್ನ ನಗರದ ಶ್ರೀ ಸದಾನಂದ ಸ್ವಾಮಿ ಮಠದಿಂದ ಸಂಸ್ಥಾನದ ವರೆಗೆ ಅಲಂಕೃತ ವಾಹನದಲ್ಲಿ ವೆಂಕಟೇಶ್ವ ಮೂರ್ತಿ ಮೆರವಣಿಗೆ ಜರುಗಿತು.
 
ಉಸ್ಮಾನಾಬಾದನ ಪಾಂಡುರಂಗ ಭಜನಾ ಮಂಡಳ, ಹೈದರಾಬಾದನ ಮಹೇಶ್ವರಿ ಮಹಿಳಾ ಮಂಡಳ, ಸೋಲಾಪುರ ಕಲಾ ತಂಡ ಸೇರಿ ವಿವಿಧ ತಂಡಗಳಿಂದ ಮೆರವಣಿಗೆಯಲ್ಲಿ ಭಜನೆ, ಲೇಜಿಮ್‌, ಕೋಲಾಟ, ನೃತ್ಯ ಪ್ರದರ್ಶನ ನಡೆಯಿತು. 

ಸಂಸ್ಥಾನದ ಶ್ರೀ ಅನಂತ ಬುವಾ ಕಾಟೇಕರ್‌ ಮಹಾರಾಜ, ಸೇವಾಧಿಕಾರಿಗಳಾದ ಶ್ರೀ ಮುರುಳೀಧರ ಕಾಟೇಕರ್‌
ಮಹಾರಾಜ, ಶ್ರೀ ಪುರುಷೋತ್ತಮ ಕಾಟೇಕರ್‌ ಮಹಾರಾಜ ನೇತೃತ್ವದಲ್ಲಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ
ಮತ್ತು ಶೋಭಾ ಯಾತ್ರೆ ಜರುಗಿತು. 

ಬ್ರಾಹ್ಮಣ ಸಮಾಜದ ಅಧ್ಯಕ್ಷ ಕಮಲಾಕರ್‌ ದೀಕ್ಷಿತ, ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ಪ್ರಮುಖರಾದ ಎ.ಎನ್‌
.ದೇಶಪಾಂಡೆ, ರಾಜಶೇಖರ ಪಾಟೀಲ್‌ ಸಸ್ತಾಪುರ, ಬಂಡು ಕರಾಡೆ, ರಾಜು ಕುಲ್ಕರ್ಣಿ, ಪೃಥ್ವಿಗೀರ ಗೋಸ್ವಾಮಿ, ರಾಜು ಪಾಟೀಲ ಹಳ್ಳಿ, ನಾಗಭೂಷಣ ಗರ್ಜೆ, ಕೃಷ್ಣಾ ಕುಲ್ಕರ್ಣಿ, ವಿಜಯಕುಮಾರ ದೇಶಪಾಂಡೆ ಹಾಗೂ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next