ಕೋಟೇಶ್ವರ: ತುಳಸಿ ಪ್ರಿಯನಾದ ಉಡುಪಿ ಶ್ರೀಕೃಷ್ಣನಿಗೆ ಪ್ರತಿದಿನ 1 ಲಕ್ಷ ತುಳಸಿ ಕೊಡಿಯನ್ನು ಸಮರ್ಪಪಿಸುವ ಸೇವೆಯ ಮೂಲಕ ಭಕ್ತರೋರ್ವರು ಗಮನ ಸೆಳೆದಿದ್ದಾರೆ.
ಹಂಗಳೂರಿನ ನಿವಾಸಿ ರಾಮಚಂದ್ರ ವರ್ಣ ಅವರ ಮನೆಯ 1.50 ಎಕ್ರೆ ವಿಸ್ತೀರ್ಣದ ಜಾಗದಲ್ಲಿ ತುಳಸಿ ಗಿಡ ಬೆಳೆಸಿದ್ದು, ದಿನಕ್ಕೆ ಒಂದು ಲಕ್ಷ ತುಳಸಿ ಕೊಡಿ ದರಿಂದ ಕೊಯ್ಯುತ್ತಿದ್ದಾರೆ.
ಶ್ರೀಕೃಷ್ಣನಿಗೆ ಪ್ರಿಯವಾದ ತುಳಸಿ ಕೊಡಿ ಯನ್ನು ದಿನಂಪ್ರತಿ ಒದಗಿಸುವಂತೆ ಪರ್ಯಾಯ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥರು ಬೇಡಿಕೆ ಮುಂದಿಟ್ಟಾಗ ಅದಕ್ಕೊಪ್ಪಿದ ರಾಮಚಂದ್ರ ವರ್ಣ ಅವರು ತುಳಸಿ ಗಿಡ ನೆಡುವ ಯೋಜನೆ ಆರಂಭಿಸಿದರು. ವಿಷ್ಣು ಸಹಸ್ರ ನಾಮಾವಳಿಯನ್ನು 2 ಆವೃತ್ತಿಯಲ್ಲಿ ಹೇಳಿ ಶ್ರೀಕೃಷ್ಣನಿಗೆ ಪ್ರತಿದಿನ 1 ಲಕ್ಷ ತುಳಸಿ ಕೊಡಿಯನ್ನು ಅರ್ಚನೆ ಮಾಡುವ ಸ್ವಾಮೀಜಿ ಅವರ ಉದ್ದೇಶವನ್ನು ಪೂರೈಸಲು ಅವರು ತಮ್ಮ ಜಾಗವನ್ನೇ ಧರ್ಮ ಶ್ರದ್ಧೆಯ ಕೆಲಸಕ್ಕೆ ಮುಡಿಪಾಗಿಟ್ಟಿದ್ದಾರೆ.
ಪಲಿಮಾರು ಸ್ವಾಮೀಜಿ ಅವರ ಪರ್ಯಾಯದ ಅವ ಧಿಯ ತನಕ ತುಳಸಿ ಕೊಡಿ ಸಮರ್ಪಣೆ ಕಾರ್ಯವು ಮುಂದು ವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಕುಟುಂಬದ ಪ್ರತಿಯೋರ್ವ ಸದಸ್ಯರು ತುಳಸಿ ಬೀಜ ಬಿತ್ತನೆಯ ಕೃಷಿಯಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಶ್ರೀಕೃಷ್ಣನ ಸೇವೆಗೆ ಮುಂದಾಗಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.