Advertisement

ಲಕ್ಷ್ಮೀ ವಿಶ್ವದ ಮೊದಲ ವನಿತಾ ಕ್ರಿಕೆಟ್ ರೆಫ್ರಿ

03:23 AM May 15, 2019 | Team Udayavani |

ದುಬಾೖ: ಭಾರತದ ಜಿ.ಎಸ್‌. ಲಕ್ಷ್ಮೀ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮ್ಯಾಚ್ ರೆಫ್ರಿ ಸಮಿತಿಗೆ ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಮ್ಯಾಚ್ ರೆಫ್ರಿ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ವನಿತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

50 ವರ್ಷದ ಲಕ್ಷ್ಮೀ ಬಲಗೈ ಬ್ಯಾಟ್ಸ್‌ಮನ್‌ ಹಾಗೂ ಬಲಗೈ ಔಟ್ಸ್ವಿಂಗ್‌ ಬೌಲರ್‌. 1986 ರಿಂದ 2004ರ ವರೆಗೆ ಆಡಿದ ಅವರು ಸೌತ್‌ ಸೆಂಟ್ರಲ್ ರೈಲ್ವೇಸ್‌, ಆಂಧ್ರ, ಬಿಹಾರ್‌, ಈಸ್ಟ್‌ ಝೋನ್‌ ಮತ್ತು ಸೌತ ಝೋನ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2008-2009ರಲ್ಲಿ ಸ್ಥಳೀಯ ಕ್ರಿಕೆಟಿನಲ್ಲಿ ಮ್ಯಾಚ್ ರೆಫ್ರಿಯಾಗಿ ಆಯ್ಕೆಗಾಗಿ ಅಲ್ಲೂ ಮೊದಲ ವನಿತಾ ರೆಫ್ರಿ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೆ 3 ವನಿತಾ ಏಕದಿನ ಮತ್ತು 3 ವನಿತಾ ಅಂತಾರಾಷ್ಟ್ರೀಯ ಟಿ20 ಗಳಲ್ಲೂ ಕಾಣಿಸಿಕೊಂಡಿದ್ದರು.

‘ಐಸಿಸಿಯ ಅಂತಾರಾಷ್ಟ್ರೀಯ ಸಮಿತಿಗೆ ಆಯ್ಕೆಯಾಗಿರುವುದು ನಿಜವಾಗಿಯೂ ಬಹುದೊಡ್ಡ ಗೌರವ. ಇದು ಜೀವನದ ಹೊಸ ಆಯಾಮವನ್ನು ತೆರೆದಿದೆ. ಭಾರತದಲ್ಲಿ ಕ್ರಿಕೆಟಿಗಳಾಗಿ ಮತ್ತು ಮ್ಯಾಚ್ ರೆಫ್ರಿಯಾಗಿ ಸುದೀರ್ಘ‌ ಕ್ರಿಕೆಟ್ ಜೀವನ ನಿಭಾಯಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರ್ತಿಯ ಮತ್ತು ಪಂದ್ಯದ ರೆಫ್ರಿ ಅನುಭವವನ್ನು ಉತ್ತಮವಾಗಿ ಬಳಸಿಕೊಳ್ಳುತ್ತೇನೆ ಎಂಬ ನಂಬಿಕೆಯಿದೆ. ಈ ಅವಕಾಶ ಕೊಟ್ಟಿರುವ ಐಸಿಸಿ, ಬಿಸಿಸಿಐ ಅಧಿಕಾರಗಳು, ಹಿರಿಯರ ಕ್ರಿಕೆಟಿಗರು ಮತ್ತು ಕುಟುಂಬಕ್ಕೆ ಹಲವು ವರ್ಷಗಳಿಂದ ನನಗೆ ಪ್ರೋತ್ಸಾಹ ನೀಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದು ಲಕ್ಷ್ಮೀ ಹೇಳಿದ್ದಾರೆ.

ಇತ್ತೀಚೆಗಷ್ಟೇ ಪುರುಷರ ಏಕದಿನ ಪಂದ್ಯದ ಅಂಪಾಯರ್‌ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ ಕ್ಲಾರಿ ಪೊಲೊಸ್ಕ್ ಅವರ ನೇಮಕಾತಿಯ ಕೆಲವೇ ದಿನಗಳಲ್ಲಿ ಲಕ್ಷ್ಮೀ ಅವರ ನೇಮಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next