Advertisement

ಗ್ರಾ.ಪಂ. ಚುನಾವಣೆ: ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಬಣಕ್ಕೆ ಭರ್ಜರಿ ಗೆಲುವು

03:34 PM Dec 30, 2020 | Team Udayavani |

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಬಲಿಗರು ಭರ್ಜರಿ ಜಯಭೇರಿ ಬಾರಿಸಿದ್ದಾರೆ.

Advertisement

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟೂ 44 ಗ್ರಾಮ ಪಂಚಾಯಿತಿಗಳಿದ್ದು, ಈವರೆಗೆ ಪ್ರಕಟವಾಗಿರುವ ಫಲಿತಾಂಶಗಳ ಪೈಕಿ ಶೇ.75ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ತಮ್ಮ ಬೆಂಬಲಿಗರು ಜಯಗಳಿಸಿದ್ದಾರೆ ಎಂದು ಹೆಬ್ಬಾಳಕರ್ ತಿಳಿಸಿದ್ದಾರೆ

ಬಡಾಲ ಅಂಕಲಗಿಯ 13 ಸದಸ್ಯರ ಪೈಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಬಲಿಗರು 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ರಾಜೇಂದ್ರ ಅಂಕಲಗಿ ಬಣ ಕೇವಲ 2 ಸ್ಥಾನಗಳೊಂದಿಗೆ ಮುಖಭಂಗ ಅನುಭವಿಸಿದೆ.

ಇದನ್ನೂ ಓದಿ:ಬೆಳ್ತಂಗಡಿ ಮತಎಣಿಕೆ ಕೇಂದ್ರದ ಬಳಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದ ಎಸ್ ಡಿಪಿಐ!

ಕುದ್ರೆಮನಿಯಲ್ಲಿ 10 ಸ್ಥಾನಗಳು ಲಕ್ಷ್ಮಿ ಹೆಬ್ಬಾಳಕರ್ ಬಣಕ್ಕೆ ಬಂದರೆ, 3 ಎಂಇಎಸ್ ಮತ್ತು 1 ಬಿಜೆಪಿ ಬೆಂಬಲಿಗರಿಗೆ ಬಂದಿದೆ. ಹಿರೇಬಾಗೇವಾಡಿಯ 32 ಸ್ಥಾನಗಳ ಪೈಕಿ 22ಕ್ಕೂ ಹೆಚ್ಚು ಸ್ಥಾನಗಳಲ್ಲಿ ಈಗಾಗಲೆ ಹೆಬ್ಬಾಳಕರ್ ಬೆಂಬಲಿಗರು ಗೆದ್ದಿದ್ದಾರೆ.

Advertisement

ಕಂಗ್ರಾಳಿ ಬಿಕೆ ಬಹು ವರ್ಷಗಳ ನಂತರ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಹಿಂಡಲಗಾ, ತುರಮರಿ, ಕಮಕಾರಟ್ಟಿಗಳಲ್ಲಿ ಸಹ ಲಕ್ಷ್ಮಿ ಹೆಬ್ಬಾಳಕರ್ ಬಣ ಭರ್ಜರಿ ಗೆಲುವು ಸಾಧಿಸಿದೆ.

ಮತದಾರರು ಅಭಿವೃದ್ಧಿಗೆ ಮತ ನೀಡಿರುವುದಕ್ಕೆ, ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಸದಾ ಋಣಿಯಾಗಿರುವುದಾಗಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next