Advertisement

50 ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಯಲಿದೆ; ಲಕ್ಷ್ಮೀ ಹೆಬ್ಬಾಳ್ಕರ್‌

11:17 AM Apr 30, 2023 | Team Udayavani |

ಬೆಳಗಾವಿ: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರು ನನ್ನ ಸೇರಿದಂತೆ ಸುಮಾರು 50 ಕಾಂಗ್ರೆಸ್ ಅಭ್ಯರ್ಥಿಗಳು, ಸಂಬಂಧಿಕರ ಮನೆಯ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದರು.

Advertisement

ಬೆಳಗಾವಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಹತಾಶೆಯಿಂದ ಕೆಲವು ವಾಮ ಮಾರ್ಗವನ್ನು ಹಿಡಿಯುವ ಸುದ್ದಿಗಳು ನಮ್ಮ ಗಮನಕ್ಕೆ ಬಂದಿವೆ ಎಂದರು. ಬೆಳಗಾವಿಯಲ್ಲಿ ನಾನು ಸೇರಿ ಮೂವರು ಹಾಗೂ ಸಂಬಂಧಿಕರ ಮೇಲೆ ಲೋಕಾಯುಕ್ತ, ಐಟಿ ದಾಳಿ ಮಾಡುವ ಸುಳಿವು ಬಂದಿವೆ.

ಎಲ್ಲ ಕಡೆಗಳಲ್ಲಿ ನಮ್ಮ ಮಾಹಿತಿದಾರರು ಮತ್ತು ಕಾಂಗ್ರೆಸ್ ಗೆ ಒಳ್ಳೆಯದನ್ನು ಬಯಸುವವರು ಇರುತ್ತಾರೆ. ಅವರಿಂದ ಈ ಮಾಹಿತಿ ಗೊತ್ತಾಗಿದೆ ಎಂದು ಹೇಳಿದರು. ನಾವು ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಕೇವಲ 10 ದಿನ ಮಾತ್ರ ಇರುವಾಗ ನಮ್ಮ ಕಾರ್ಯಕರ್ತರು ಹಾಗೂ ಜನರು ಗೊಂದಲಕ್ಕೆ ಇಡಾಗುವ ಪರಿಸ್ಥಿತಿ ತರುವ ಕುತಂತ್ರ ನಡೆಸಿದ್ದಾರೆ ಎಂದು ಹೆಬ್ಬಾಳಕರ ಆರೋಪಿಸಿದರು.

ಯಾವುದೇ ಚುನಾವಣೆಯ ಬಂದಾಗ ವಿರೋಧ ಪಕ್ಷದವರನ್ನು, ಮತದಾರರನ್ನು ಬೇರೆ ಕಡೆ ಗಮನ ಹರಿಸುವುದು ಹವ್ಯಾಸವಾಗಿದೆ. ಸಮಯ ಬಹಳ ಮುಖ್ಯವಾಗಿದೆ. ಕೊನೆಯ ಹಂತದ ಪ್ರಚಾರದ ಸಂದರ್ಭದಲ್ಲಿ ಇಂಥ ಮಾರ್ಗವನ್ನು ಬಿಜೆಪಿ ಕೈ ಬಿಡಬೇಕು ಎಂದರು. ಚುನಾವಣೆಯಲ್ಲಿ ನನ್ನ ಸೋಲಿಸುವುದು, ಗೆಲ್ಲಿಸುವುದು ಗ್ರಾಮೀಣ ಮತಕ್ಷೇತ್ರದ ಜನ. ಹೀಗಿರುವಾಗ ಬಿಜೆಪಿ ಇಂತಹ ಕುತಂತ್ರ ಕಾರ್ಯಕ್ಕೆ ಮುಂದಾಗುವದು ಸರಿಯಲ್ಲ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ ನನ್ನ ಕ್ಷೇತ್ರದ ಮೇಲೆ ಯಾವುದೇ ಮೇಲೆ ಪರಿಣಾಮ ಬಿರುವುದಿಲ್ಲ ಎಂದರು.

ಕರ್ನಾಟಕದಲ್ಲಿ ಈ ಬಾರಿ ಎಲ್ಲ ಕಡೆ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಮತದಾರರು ಕಾಂಗ್ರೆಸ್ ಸರಕಾರ ತರುವ ಮನಸ್ಸು ಮಾಡಿದ್ದಾರೆ ಎಂದ ಅವರು

Advertisement

ಬೆಳಗಾವಿ ಜಿಲ್ಲೆಯಲ್ಲಿಯೂ ಉತ್ತಮವಾದ ವಾತಾವರಣ ಇದೆ ಎಂದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಪ್ರತಿಯೊಂದು ರಾಜ್ಯದಲ್ಲಿ ಚುನಾವಣೆಯ ವೇಳೆ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುವುದು ಬಿಜೆಪಿಯ ಜಾಯಮಾನವಾಗಿದೆ. ಪ್ರಜಾಪ್ರಭುತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಜನರು ಮಾಡಬೇಕು. ಅದನ್ನು ಬಿಟ್ಟು ವಾಮ ಮಾರ್ಗ ಹಿಡಿಯುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next