Advertisement
ಲಕ್ಷ್ಮೀ ಹೆಬ್ಬಾಳ್‌ಕರ್ ಅವರು ಅಗಸ್ಟ್ 25 ರಂದು ತಮ್ಮ ಸ್ವಕ್ಷೇತ್ರದಲ್ಲಿ ಮರಾಠಿ ಸಂಘಟನೆಯೊಂದು ಆಯೋಜಿಸಿದ್ದ ಗಣೇಶ ಚತುರ್ಥಿ ಸಂಭ್ರಮದಲ್ಲಿ ಭಾಷಣ ಮಾಡುವ ಉದ್ವೇಗದಲ್ಲಿ ” ಎಲ್ಲದ್ದಕ್ಕೂ ಮೊದಲು ಕ್ಷೇತ್ರದ ವಿಕಾಸ ಆಗಬೇಕಾಗಿದೆ. ನಾನೀಗ ಕರ್ನಾಟಕ ನೆಲದಲ್ಲಿದ್ದೇನೆ.ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಕೋರ್ಟ್ ತೀರ್ಪು ಬಂದರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ, ಆಗ ನಾನೇ ಮೊದಲು ಧ್ವಜ ಹಿಡಿದು ಜೈಕಾರ ಹಾಕುತ್ತೇನೆ.ಯಾರಿಗೂ ಈ ರೀತಿ ಹೇಳುವ ಧೈರ್ಯವಿಲ್ಲ. ನಾನು ಭಗವಂತ, ನನ್ನ ತಂದೆ, ತಾಯಿಗೆ ಮಾತ್ರ ಹೆದರುತ್ತೇನೆ ” ಎಂದು ಮರಾಠಿ ಭಾಷೆಯಲ್ಲಿ ಮಾಡಿರುವ ಭಾಷಣದ ತುಣುಕು ಇದೀಗ ವೈರಲ್ ಆಗಿದೆ.
Related Articles
ಹೇಳಿಕೆ ಬಗ್ಗೆ ನನಗೆ ದೂರು ಬಂದಿಲ್ಲ, ದೂರು ಬಂದಲ್ಲಿ, ಎಲ್ಲಿ ಯಾವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ ಎನ್ನುವ ಕುರಿತು ಪರಿಶೀಲನೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
Advertisement
ಆಕೆ ತಪ್ಪು ಮಾಡಿಲ್ಲ
ಲಕ್ಷ್ಮೀ ಹೆಬ್ಬಾಳ್‌ಕರ್ ಅವರು ಯಾವುದೇ ತಪ್ಪು ಮಾಡಿಲ್ಲ. ಆಡಿಯೋದ ಒಂದು ತುಣುಕನ್ನಷ್ಟೆ ಬಿಡುಗಡೆ ಮಾಡಲಾಗಿದೆ. ಯಾರೋ ಆಕೆಯ ವಿರುದ್ಧ ಬೇಕಂತಲೇ ಸಂಚು ಮಾಡಿದ್ದಾರೆ ಎಂದ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.