Advertisement

ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪೋತ್ಸವ

10:10 AM Dec 27, 2017 | |

ಮೂಡಬಿದಿರೆ: ಸಾವಿರ ಕಂಬದ ಬಸದಿಯಲ್ಲಿ ಸೋಮವಾರ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಹಿರಿತನದಲ್ಲಿ ಲಕ್ಷ ದೀಪೋತ್ಸವ ಜರಗಿತು.

Advertisement

ಪುಷ್ಪಗಿರಿ ಕ್ಷೇತ್ರದ ದಿಗಂಬರ ಸಂತ ಆಚಾರ್ಯ 108 ಪುಷ್ಪದಂತ ಸಾಗರ ಮುನಿ ಮಹಾರಾಜರು, ಅವರ ಶಿಷ್ಯಂದಿರಾದ 108 ಪ್ರಸಂಗಸಾಗರ ಮುನಿಮಹಾರಾಜರು, 108 ಪ್ರಮುಖ ಸಾಗರ ಮುನಿಮಹಾರಾಜರು ಅವರ ಉಪಸ್ಥಿತಿಯಲ್ಲಿ ನಡೆದ ಲಕ್ಷ ದೀಪೋತ್ಸವಕ್ಕೆ ಮೂಡಬಿದಿರೆ ಶಾಸಕ ಕೆ. ಅಭಯ ಚಂದ್ರ ಚಾಲನೆ ನೀಡಿದರು. ಇದೇ ಮೊದಲ ಬಾರಿಗೆ ಜೈನರೊಂದಿಗೆ ಜೈನೇತರರಿಗೂ ದೀಪ ಬೆಳಗಿಸಲು ಅವಕಾಶ ಕಲ್ಪಿಸಲಾಗಿತ್ತು.

ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್‌ ಕುಮಾರ್‌, ದಿನೇಶ್‌ಕುಮಾರ್‌ ಆನಡ್ಕ, ಉದ್ಯಮಿ ಪುಷ್ಪರಾಜ್‌ ಜೈನ್‌, ಪುರಸಭಾ ಸದಸ್ಯ, ವಕೀಲರ ಸಂಘದ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌, ಜೈನ್‌ಮಿಲನ್‌ ಅಧ್ಯಕ್ಷ ಧನಕೀರ್ತಿ ಬಲಿಪ, ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯರಾದ ದಿನೇಶ್‌ ಗೌಡ, ನಾಗವರ್ಮ ಜೈನ್‌, ಶ್ರೀ ದಿಗಂಬರ ಜೈನ ಮಹಾಸಮಿತಿ ಅಧ್ಯಕ್ಷ ಮಣೀಂದ್ರ ಜೈನ್‌, ಶೀತಲನಾಥ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಪ್ರಸನ್ನ ಜೈನ್‌, ಕೆ.ಪಿ. ಜಗದೀಶ ಅಧಿಕಾರಿ, ಹರಿಶ್ಚಂದ್ರ ಜೈನ್‌, ರಾಮಗೋಪಾಲ ಜೈನ್‌ ಸಹಿತ ಕರ್ನಾಟಕದ ವಿವಿಧ ಜಿಲ್ಲೆಗಳು, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳಿಂದ ಆಗಮಿಸಿದ್ದ ಶ್ರಾವಕ, ಶ್ರಾವಿಕೆಯರು ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next