Advertisement

ಲಕ್ಷ್ಮೇಶ್ವರದ ಸ್ವಯಂ ಭೂ ಸೋಮೇಶ್ವರ 

03:55 AM Jul 29, 2017 | |

ಚಾಲುಕ್ಯರ ವಾಸ್ತುವೈಭವಕ್ಕೆ ಸಾಕ್ಷಿಯಾಗಿರುವ ಸೋಮೇಶ್ವರ ದೇವಾಲಯ ಭವ್ಯವಾಗಿದ್ದು ನೃತ್ಯ ಮಂಟಪ, ಸಭಾಮಂಟಪ, ಪೌಳಿ, ಘಟಿಕಾಸ್ಥಳ  ಪೂರ್ವಕ್ಕಿರುವ ಮಹಾದ್ವಾರ ಹಾಗೂ ಅದರ ಮುಂದಿರುವ ಎಡಬಲಗಳಲ್ಲಿರುವ ಚಂದ್ರಶಾಲೆ ಎಲ್ಲವೂ ಅಪೂರ್ವವಾಗಿವೆ.

Advertisement

    ದೇವಾಲಯಗಳ ತವರು ಎಂದೇ  ಖ್ಯಾತವಾದ ಲಕ್ಷ್ಮೇಶ್ವರದಲ್ಲಿ ಸುಮಾರು 50ಕ್ಕೂ ಹೆಚ್ಚು ದೇವಾಲಯಗಳಿವೆ. ಇವುಗಳಲ್ಲಿ  ಪ್ರಮುಖವಾದದ್ದು ಸ್ವಯಂಭು ಸೋಮೇಶ್ವರ ದೇವಾಲಯ. ಈ ಪ್ರದೇಶವನ್ನು 10ನೇ ಶತಮಾನದಲ್ಲಿ ಆಳುತ್ತಿದ್ದ ಸರ್ವೇಶ್ವರನೆಂಬ ಮಾಂಡಲಿಕ, ತನಗೆ ಮಗ ಹುಟ್ಟಿದಾಗ ಪುತ್ರೋತ್ಸವದ ಸಂಭ್ರಮದಲ್ಲಿ  ಕಟ್ಟಿಸಿದನಂತೆ. ಈ ದೇವಾಲಯವನ್ನು  ಚಾಲುಕ್ಯರ ಮಾದರಿ ದೇವಾಲಯವನ್ನು  ಕಟ್ಟಿಸಿದನೆಂದು ಇತಿಹಾಸ ಹೇಳುತ್ತದೆ.   ಅಂದಿನಿಂದ ಸೋಮೇಶ್ವರ ಮಾಂಜರ ಕುಲದೇವತೆಯಾಗಿ ಇಲ್ಲಿ ಪೂಜೆಗೊಳ್ಳುತ್ತಿ¨ªಾನೆ ಎಂದು ಐತಿಹ್ಯ ಹೇಳುತ್ತದೆ.  ಚಾಲುಕ್ಯರ ವಾಸ್ತುವೈಭವಕ್ಕೆ ಸಾಕ್ಷಿಯಾಗಿರುವ ಸೋಮೇಶ್ವರ ದೇವಾಲಯ ಭವ್ಯವಾಗಿದ್ದು ನೃತ್ಯ ಮಂಟಪ, ಸಭಾಮಂಟಪ, ಪೌಳಿ, ಘಟಿಕಾಸ್ಥಳ  ಪೂರ್ವಕ್ಕಿರುವ ಮಹಾದ್ವಾರ ಹಾಗೂ ಅದರ ಮುಂದಿರುವ ಎಡಬಲಗಳಲ್ಲಿರುವ ಚಂದ್ರಶಾಲೆ ಎಲ್ಲವೂ ಅಪೂರ್ವವಾಗಿವೆ.

     ದೇವಾಲಯದ ಪೂರ್ವ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಮಹಾದ್ವಾರಗಳಿವೆ. ದೇಗುಲದ ಸುತ್ತ ಕಲ್ಲಿನ ಕೋಟೆ ಇದ್ದು, ದೇಗುಲದ ಇಕ್ಕೆಲಗಳಲ್ಲಿ ಚಂದ್ರಶಾಲೆಗಳಿವೆ. 
ಮಾಘ ಮಾಸದಲ್ಲಿ ಪ್ರಾತಃ ಕಾಲದಲ್ಲಿ ಸೂರ್ಯಕಿರಣಗಳು ದೇವರ ಮೇಲೆ ಬೀಳುವಂತೆ ನಿರ್ಮಿಸಿರುವ ವಾಸ್ತುಶಿಲ್ಪಿಗಳ ವೈಜ್ಞಾನಿಕ ಕಲ್ಪನೆ ಎಲ್ಲರನ್ನೂ ಬೆರಗುಗೊಳಿಸುತ್ತದೆ.

 ಈ ದೇವಸ್ಥಾನದ ಸುತ್ತಲೂ ಇರುವ ಪಂಚಲಿಂಗಗಳ ಚಿಕ್ಕ ಗುಡಿಗಳು. ಸೋಮೇಶ್ವರ ದೇವಾಲಯದ ವೈಭವವನ್ನು ನೂರ್ಮಡಿಗೊಳಿಸಿವೆ. ಇಲ್ಲಿನ ಗರ್ಭಗೃಹದಲ್ಲಿ ಶಿವ  ಲಿಂಗರೂಪದ ಬದಲು ವೃಷಭಾರೂಢನಾಗಿ ಪಾರ್ವತಿಯ ಸಮೇತ ನೆಲೆಸಿ¨ªಾನೆ. ಇಲ್ಲಿ ಶಿವನ ಮೂರ್ತಿಗೆ ಪೂಜೆ ನಡೆಯುವುದು ವಿಶೇಷ. ನಂದಿಯ ಮೇಲೆ ಕುಳಿತ ಪಾರ್ವತಿ ಪರಮೇಶ್ವರರ ವಿಗ್ರಹ ಅತ್ಯಾಕರ್ಷಕವಾಗಿದ್ದು,  ಮಾಘ ಮಾಸದಲ್ಲಿ ರಥೋತ್ಸವ ನಡೆಯುತ್ತದೆ. 
ಸಂಪೂರ್ಣವಾಗಿ ಕಲಾಕೌಶಲ್ಯದಿಂದ ಕೂಡಿದ ದೇವಾಲಯದಲ್ಲಿ 10ಕ್ಕೂ ಹೆಚ್ಚು ಕಲ್ಲಿನ ಕಂಬಗಳಿವೆ. ನುಣುಪಾದ ಗ್ರಾನೈಟ್‌ ಶಿಲೆಯ ಈ ಕಂಬಗಳು ದರ್ಪಣದೋಪಾದಿಯಲ್ಲಿ ಪ್ರತಿಫ‌ಲಿಸುತ್ತವೆ. ಹಿಂದೆ ಇದೊಂದು ಪ್ರಮುಖ ವಿದ್ಯಾಕೇಂದ್ರವಾಗಿತ್ತೆಂದೂ ಇತಿಹಾಸ ಹೇಳುತ್ತದೆ. ಗುಡಿಯ ಹಿಂಭಾಗದಲ್ಲಿ 10ಅಡಿ ಆಳದ ಮೆಟ್ಟಿಲುಗಳಿರುವ ದೊಡ್ಡ ಬಾವಿಯಿದ್ದು ಇದನ್ನು ಗೌರಿ ಎಂಬಾಕೆ ಕಟ್ಟಿಸಿದಳೆಂದು ಶಾಸನಗಳಿಂದ ತಿಳಿದುಬರುತ್ತದೆ. ದೇವಾಲಯ ಪುರಾತತ್ವ ಇಲಾಖೆ ವ್ಯಾಪ್ತಿಗೊಳಪಟ್ಟಿದೆ.

ತಲುಪುವ ಮಾರ್ಗ ಹೀಗೆ- ದೇಶದ ಪ್ರಮುಖ ನಗರಗಳಿಂದ ಧಾರವಾಡಕ್ಕೆ ಸಾಕಷ್ಟು ಬಸ್‌ ವ್ಯವಸ್ಥೆ ಇದೆ.  ಇಲ್ಲಿಂದ  ಲಕ್ಷೆ$¾àಶ್ವರಕ್ಕೆ ಕೇವಲ 7 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. 

Advertisement

 ಆಶಾ ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next