Advertisement
ಸುಬೇಂದ್ರ ಜೈನ್, ಆದಿತಿ ಶೋಕ, ಸ್ಫೂರ್ತಿ ಅಶೋಕ, ಚಂದನಾ, ರೋಶನಿ, ವರ್ಷಿನಿ, ಸನ್ಮತಿ ಇವರು ಉತ್ಸವದ ಎರಡನೇ ದಿನಕ್ಕೆ ರಂಗು ತಂದರು. ಎರಡು ಗಂಟೆಗೂ ಅಧಿಕ ಕಾಲ ವಿವಿಧ ರೂಪಕ ಪ್ರಸ್ತುತಪಡಿಸಿದರು.
ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದ ಎರಡನೇ ದಿನ ಸಂಜೆ ಬೆಂಗಳೂರಿನ ಪ್ರೀತಿ ಸುಂದರರಾಜನ್ ನೇತೃತ್ವದಲ್ಲಿ ಪ್ರಸ್ತುತ ಪಡಿಸಲ್ಪಟ್ಟ ಭರತನಾಟ್ಯದ ವಿವಿಧ ಭಂಗಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸಿತು. ಗಣಪತಿ ಸ್ತುತಿಯೊಂದಿಗೆ ನೃತ್ಯ ಆರಂಭಿಸಿ ಪುಷ್ಪಾಂಜಲಿ ನೃತ್ಯ ಪ್ರಸ್ತುತಪಡಿಸಿದರು. ಶಿವಸ್ತುತಿಯನ್ನು ತಾಂ, ತಾಂ ಎನ್ನುತ್ತ ನೃತ್ಯ ಮಾಡುತ್ತ ಅಚ್ಚರಿಯ ರೀತಿಯಲ್ಲಿ ಹೆಜ್ಜೆಹಾಕಿ ಪ್ರೇಕ್ಷಕರಿಗೆ ಮುದ ನೀಡಿದರು. ನಂತರ ದಶಾವತಾರ, ಕೃಷ್ಣಾವತಾರದಲ್ಲಿ ಅದ್ಬುತವಾಗಿ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.