Advertisement
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1975 ರಲ್ಲಿ ಅಂದಿನ ಸಮಾಜ ಬಾಂಧವರು ಸೇರಿ ಸಮಾಜದ ಆರಾಧ್ಯ ದೇವಿ ಅಂಬಾಭವಾನಿ ದೇವಸ್ಥಾನ ಕಟ್ಟಿದ್ದರು. ಸುಮಾರು 20 ವರ್ಷಗಳ ನಂತರ ಚಿಕ್ಕದಾದ ಈ ದೇವಸ್ಥಾನವನ್ನು ದೊಡ್ಡದಾಗಿ, ಸುಂದರವಾಗಿ ನಿರ್ಮಿಸಬೇಕು ಎಂಬ ಹಿರಿಯರ ಆಸೆಯಂತೆ ಮೂಲ ದೇವಸ್ಥಾನದ ಸುತ್ತಲಿದ್ದ ಹಳೆಯ ಮನೆ, ಖಾಲಿ ಜಾಗವನ್ನು ದೇವಿ ಅನುಗ್ರಹದಿಂದ ಖರೀದಿಸಲಾಯಿತು. 2015 ರಲ್ಲಿ ನೂತನ ದೇವಸ್ಥಾನ, ಸಭಾ ಭವನ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಲಾಯಿತು. ಸಮಾಜ ಬಾಂಧವರ ಆರೇಳು ವರ್ಷ ಗಳ ನಿರಂತರ ಶ್ರಮ, ಶ್ರದ್ಧೆಯಿಂದ ಇದೀಗ 14 ಸಾವಿರ ಚದರ ಅಡಿ ನಿವೇಶನದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಸುಂದರ ದೇವಸ್ಥಾನ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಅನುದಾನದ ಕೊರತೆ ನಡುವೆ ಸಮುದಾಯ ಭವನದ ಕಾಮಗಾರಿ ಪ್ರಗತಿ ಹಂತದಲ್ಲಿದೆ.
Related Articles
Advertisement
ಶ್ರೀನಿವಾಸ ಹರೀಸಾ ಖೋಡೆ ಅವರಿಂದ ದೇವಸ್ಥಾನ ಲೋಕಾರ್ಪಣೆ ನೆರವೇರಲಿದೆ. ರಾಜಕಾರಣಿಗಳು, ಗಣ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ವಧರ್ಮದ ಸಮಾಜದ ಹಿರಿಯರು ಉಪಸ್ಥಿತರಿರುವರು ಎಂದು ಹೇಳಿದರು.
ಪಂಚ ಟ್ರಸ್ಟ್ ಕಮೀಟಿಯ ಲಕ್ಷ್ಮಣಸಾ ರಾಜೋಳಿ, ತುಕಾರಾಮಸಾ ಬದಿ, ವಿಠ್ಠಲಸಾ ಶಿದ್ಲಿಂಗ, ಆನಂದಸಾ ಬದಿ, ಯಲ್ಲಪ್ಪ ಬದಿ, ತಿಪ್ಪಣ್ಣಸಾ ಬಾಕಳೆ, ಪಾಂಡುಸಾ ಬದಿ, ಛಾಯಾಸಾ ಬದಿ, ಗಣಪತಸಾ ಪೂಜಾರಿ, ರಂಗನಾಥಸಾ ಬದಿ, ಕಲಾವಿದ ಶಾಂತರಾಮ ಹಾಜರಿದ್ದರು.