Advertisement
ಸಂಸದರ ಜತೆ ಸವದಿ ಸ್ವಲ್ಪ ಹೊತ್ತು ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ಸಂಗಣ್ಣ ಕರಡಿಗೆ ಟಿಕೆಟ್ ಕೈ ತಪ್ಪಿದ ಬಳಿಕ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ ಎನ್ನುವ ಚರ್ಚೆ ನಡೆದಿರುವ ಬೆನ್ನಲ್ಲೇ ಸವದಿ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಹಿಂದೆ ಸಂಗಣ್ಣ ಜೆಡಿಎಸ್‌ನಲ್ಲಿದ್ದಾಗ ಸವದಿಯೇ ಅವರನ್ನು ಬಿಜೆಪಿಗೆ ಕರೆ ತಂದಿದ್ದರು. ಈಗ ಸಂಗಣ್ಣರನ್ನು ಕಾಂಗ್ರೆಸ್‌ಗೆ ತರಲು ಸವದಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಂಗಣ್ಣ ಮಾತ್ರ, ಸವದಿ ನನ್ನ ಆತ್ಮೀಯ ಸಹೋದರ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಶಾಸಕ ಸಂಸದ ಕರಡಿ ಸಂಗಣ್ಣ ಅವರು ಎ.16ರಂದು ಕಾಂಗ್ರೆಸ್ ಸೇರಲಿರುವ ಮಾಹಿತಿ ಇದೆ. ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಬಳಿಕ ಪ್ರತಿಕ್ರಿಯಿಸುವೆ. ಅಲ್ಲಿಯವರೆಗೂ ಏನೂ ಹೇಳುವುದಿಲ್ಲ.
-ದೊಡ್ಡನಗೌಡ ಪಾಟೀಲ್, ಶಾಸಕ, ಕುಷ್ಟಗಿ