ಕೊಚ್ಚಿ: ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಶುಕ್ರವಾರದ ಬದಲಾಗಿ ಭಾನುವಾರ ರಜೆ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಜತೆಗೆ ಶಾಲೆಯ ವೇಳಾಪಟ್ಟಿಯಲ್ಲಿಯೂ ಬದಲು ಮಾಡಲು ನಿರ್ಧರಿಸಲಾಗಿದೆ ಎಂದು ಡಿ.17ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.
ಧಾರ್ಮಿಕ ಕಾರಣಗಳಿಗಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಶುಕ್ರವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗುತ್ತಿತ್ತು. ಈ ನಿರ್ಧಾರಕ್ಕೆ ಆಕ್ಷೇಪ ಮಾಡಿರುವ ಸಂಸದ ಮೊಹಮ್ಮದ್ ಫೈಜಲ್ ಇದೊಂದು ಏಕಪಕ್ಷೀಯ ಹಾಗೂ ಒಪ್ಪತಕ್ಕ ನಿರ್ಧಾರವಲ್ಲ ಎಂದಿದಿದ್ದಾರೆ.
ಇದನ್ನೂ ಓದಿ:ಯಡ್ರಾಮಿ : ರೈತ ಸಂಘಟನೆಯಿಂದ ಅಹೋರಾತ್ರಿ ಪ್ರತಿಭಟನೆ ; ಹಲವರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಆಡಳಿತಾಧಿಕಾರಿಯೇ ಎಲ್ಲದರ ಬಗ್ಗೆಯೂ ನಿರ್ಧಾರ ಕೈಗೊಳ್ಳುವುದಿದ್ದರೆ, ಚುನಾಯಿತ ಪ್ರತಿನಿಧಿಗಳು ಏಕಿರಬೇಕು ಎಂದು ಪ್ರಶ್ನಿಸಿದ್ದಾರೆ.