Advertisement
ಶ್ರೀ ಮಂಜುನಾಥ ಸ್ವಾಮಿಗೆ ಗುಡಿಯಲ್ಲಿ ಪೂಜೆ, ನೈವೇದ್ಯ ಸೇರಿದಂತೆ ವಿವಿಧ ಸೇವೆ ನಡೆದು ಪಲ್ಲಕ್ಕಿಯನ್ನು ಹೊತ್ತು 16 ಸುತ್ತು ಬಂದ ಬಳಿಕ ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನಿರಿಸಿ ಆರತಿಬೆಳಗಿ ಮೆರವಣಿಗೆಯೊಂದಿಗೆ ವಸಂತ ಮಹಲ್‌ಗೆ ಪಲ್ಲಕ್ಕಿ ಸುತ್ತು, ಚೆಂಡೆ ಸುತ್ತು, ನಾದಸ್ವರ ಸುತ್ತು, ಸಂಗೀತ ಸುತ್ತು, ಕೊಳಲು ಸುತ್ತು, ಶಂಖ ಸುತ್ತು, ಸರ್ವ ವಾದ್ಯ ಸಹಿತ ಒಟ್ಟು 16 ಸುತ್ತುಗಳಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ವಸಂತ ಮಹಲ್‌ನ ಹೊಸಕಟ್ಟೆಗೆ ಕೊಂಡೊಯ್ಯಲಾಯಿತು. ಅಲ್ಲಿ ದೇವರಿಗೆ ಹೊಸಕಟ್ಟೆ ಉತ್ಸವದ ಉತ್ಸವದ ಪೂಜಾ ವಿಧಿ ವಿಧಾನಗಳು ನೆರವೇರಿದವು. ಬೆಳ್ಳಿರಥದೊಂದಿಗೆ ಹೊಸಕಟ್ಟೆ ಉತ್ಸವ ಪೂರ್ಣಗೊಂಡಿತು.
Related Articles
ಲಕ್ಷ ದೀಪೋತ್ಸವದ ಮೂರನೇ ದಿನ ಸೋಮವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಲಿತೋದ್ಯಾನ ಉತ್ಸವ ನಡೆಯಲಿದೆ. ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ ಲಲಿತಕಲಾಗೋಷ್ಠಿ, ನಾಗಸ್ವರ ವಾದನ, ಭಾವ-ಯೋಗ-ಗಾನ-ನೃತ್ಯ ಪ್ರದರ್ಶನ, ರಾತ್ರಿ ಗಂಟೆ 8.30ರಿಂದ ಹಾಸನದ ನಾಟ್ಯಕಲಾನಿವಾಸ್ ವಿದ್ವಾನ್ ಉನ್ನತ್ ಮತ್ತು ತಂಡದಿಂದ ಶ್ರೀ ಸ್ವಾತಿ ತಿರುನಾಳರ ಭಾವಯಾಮಿ ರಘುರಾಮಮ್ ರಾಮಾಯಣ ಪ್ರಸ್ತುತಿ ಪ್ರದರ್ಶನಗೊಳ್ಳಲಿದೆ. ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 6ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭರತನಾಟ್ಯ ಪ್ರದರ್ಶನಗೊಳ್ಳಲಿದೆ.
Advertisement