Advertisement
ಶಯನೋತ್ಸವ ಅಂದರೆ ದೇವರಿಗೆ ಹರಕೆ ರೂಪದಲ್ಲಿ ಮಲ್ಲಿಗೆ ಹೂ ಸಮರ್ಪಿಸುವ ಸೇವೆ. ಇದು ಒಂಬತ್ತು ಮಾಗಣೆ ವ್ಯಾಪ್ತಿಯ ದೇವಸ್ಥಾನವಾಗಿದ್ದರೂ 32 ಗ್ರಾಮಗಳಿಂದ ಮಾತ್ರವಲ್ಲದೆ ಕಾಸರಗೋಡು, ಉಡುಪಿ ಮತ್ತು ದ.ಕ. ಜಿಲ್ಲೆಯ ಹೆಚ್ಚಿನ ಭಕ್ತರು ದೇವರ ಶಯನಕ್ಕೆ ಮಲ್ಲಿಗೆ ಹೂ ಸಮರ್ಪಿಸುತ್ತಾರೆ.
ಶುಕ್ರವಾರ ನಡೆದ ಬಪ್ಪನಾಡು ಶಯನೋತ್ಸವಕ್ಕೆ ಸುಮಾರು 80,000ದಿಂದ 1 ಲಕ್ಷ ಚೆಂಡುಗಳಷ್ಟು ಮಲ್ಲಿಗೆ ಅರ್ಪಿತವಾಗಿದೆ ಎಂಬುದು ವಿಶೇಷ. ಇದು ಸಾರ್ವತ್ರಿಕ ದಾಖಲೆ ಎಂಬುದು ಭಕ್ತರ ಅಭಿಪ್ರಾಯ. ಒಂದು ಚೆಂಡು ಮಲ್ಲಿಗೆ ದರ ಸುಮಾರು 70 ರಿಂದ 80 ರೂ. ಗಳಿತ್ತು. ಸಾವಿರಗಟ್ಟಲೆ ಮಲ್ಲಿಗೆ ಚೆಂಡು ಬಂದ ಹಿನ್ನೆಲೆಯಲ್ಲಿ ದೇವಾಲಯದ ಗರ್ಭಗುಡಿಯ ಹೊರಭಾಗದ ಸುತ್ತು ಪೌಳಿಯ ಸುತ್ತ ಮಲ್ಲಿಗೆಯಲ್ಲಿ ಇಡಲಾಗಿತ್ತು. ಹೀಗಾಗಿ ದೇವ ಸ್ಥಾನ ಆವರಣದಲ್ಲಿ ಮಲ್ಲಿಗೆಯ ಪರಿಮಳವೇ ಮನ ತಣಿಸುವಂತಿತ್ತು. ಹರಕೆ ರೂಪದಲ್ಲಿ ಹೂ ನೀಡಿದವರಿಗೆ ದೇವಸ್ಥಾನದ ವತಿಯಿಂದ ರಶೀದಿ ನೀಡಲಾಯಿತು. ಅದನ್ನು ಶುಕ್ರ ವಾರ ದೇವಸ್ಥಾನದಲ್ಲಿ ತೋರಿಸಿ, ಮಲ್ಲಿಗೆ ಪ್ರಸಾದವನ್ನು ಭಕ್ತರು ಪಡೆದುಕೊಂಡರು. ಇಲ್ಲಿ ಸ್ವೀಕರಿಸುವ ಮಲ್ಲಿಗೆ ಎಷ್ಟು ಎಂಬುದನ್ನು ನಿಖರವಾಗಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ, ಅಂದಾಜು ಹಾಗೂ ಪ್ರತೀ ವರ್ಷದ ಮಲ್ಲಿಗೆಯ ಆಗಮನದ ಹಿನ್ನೆಲೆಯಿಂದ ಲೆಕ್ಕ ಮಾಡಲಾಗು ತ್ತದೆ. ಇದರಂತೆ ಸುಮಾರು ಒಂದು ಲಕ್ಷ ಚೆಂಡು ಮಲ್ಲಿಗೆ ಸಮರ್ಪಿತವಾಗಿರಬಹುದು ಎಂಬುದು ಸಾರ್ವತ್ರಿಕ ಅನಿಸಿಕೆ.
Related Articles
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಶಯನೋತ್ಸವಕ್ಕೆ ಸಲ್ಲಿಕೆಯಾಗುವ ಮಲ್ಲಿಗೆ ಹೂವಿಗೆ ವಿಶೇಷ ಮಾನ್ಯತೆ ಇದೆ. ಹೀಗಾಗಿ ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಮಲ್ಲಿಗೆ ಹೂವನ್ನು ಹರಕೆಯ ರೂಪದಲ್ಲಿ ಸಲ್ಲಿಸುತ್ತಾರೆ. ಈ ಬಾರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡು ಬಂದಿದೆ.
– ಮನೋಹರ್ ಶೆಟ್ಟಿ,
ಕ್ಷೇತ್ರದ ಮ್ಯಾನೇಜಿಂಗ್ ಟ್ರಸ್ಟಿ
Advertisement
50ಕ್ಕೂ ಅಧಿಕ ಮಾರಾಟಗಾರರು!ಮೂಲ್ಕಿಯಿಂದ ಆರಂಭವಾಗಿ ಮುಖ್ಯದ್ವಾರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 50ಕ್ಕೂ ಮಿಕ್ಕಿ ಮಲ್ಲಿಗೆ ಮಾರಾಟಗಾರರು ಗುರುವಾರ ಮಧ್ಯಾಹ್ನದಿಂದಲೇ ಮಲ್ಲಿಗೆ ಮಾರಾಟದಲ್ಲಿ ನಿರತರಾಗಿದ್ದರು. ಉಡುಪಿ, ಕಟಪಾಡಿ, ಪಡುಬಿದ್ರಿ, ಮೂಲ್ಕಿ, ಕಾರ್ನಾಡು, ಹಳೆಯಂಗಡಿ, ಸುರತ್ಕಲ್, ಮಂಗಳೂರಿನ ಹೂವಿನ ವ್ಯಾಪಾರಿಗಳು ಭಾಗವಹಿಸಿದ್ದರು. ಬಾಳೆ ಹಗ್ಗದಲ್ಲಿ ನೇಯ್ದ ಮಲ್ಲಿಗೆ ಮಾರಾಟಕ್ಕಷ್ಟೇ ಸೀಮಿತ ಮಾಡಲಾಗಿತು.
– ವೇದವ್ಯಾಸ್, ಹೂವಿನ ಮಾರಾಟಗಾರರು ಲೆಕ್ಕ ಇಲ್ಲ
ಈ ಬಾರಿಯ ಶಯನೋತ್ಸವದಲ್ಲಿ ಹೆಚ್ಚಿನ ಮಲ್ಲಿಗೆ ಬಂದಿದೆ. ಆದರೆ, ಎಷ್ಟು ಬಂದಿದೆ ಎಂಬುದನ್ನು ಲೆಕ್ಕ ಹಾಕಲಾಗುತ್ತಿಲ್ಲ. ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಶಯನೋತ್ಸವದ ಸಂದರ್ಭಕ್ಕಿಂತಲೂ ಅಧಿಕ ಮಲ್ಲಿಗೆ ಬಂದಿದೆ.
– ಜಯಮ್ಮಾ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ದೇವಾಲಯವೆಲ್ಲ ಮಲ್ಲಿಗೆಯ ಸುವಾಸನೆ..!
ಶ್ರೀ ದೇವಿಯ ಶಯನಕ್ಕೆಂದು ಭಕ್ತರು ದೇವರಿಗೆ ಅರ್ಪಿಸುವ ಮಲ್ಲಿಗೆ ಹೂವನ್ನು ಇಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ಗುರುವಾರ ಸಂಜೆಯಿಂದ ಭಕ್ತರು ಶ್ರೀ ದೇವರಿಗೆ ಮಲ್ಲಿಗೆ ಹೂ ಅರ್ಪಿಸಿದರು. ಭಾರೀ ಪ್ರಮಾಣದ ಮಲ್ಲಿಗೆ ಇದ್ದ ಹಿನ್ನೆಲೆಯಲ್ಲಿ ದೇವಾಲಯವೆಲ್ಲ ಘಮ ಘಮ ಸುವಾಸನೆಯಿಂದ ಮನ ತಣಿಸಿತು.