ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ನ. 29 (ಸೋಮವಾರ) ರಿಂದ ಡಿ. 4ರ ವರೆಗೆ ನೆರವೇರಲಿದೆ.
ಈ ಪ್ರಯುಕ್ತ ದೇವಸ್ಥಾನ, ಬೀಡು, ಮುಖ್ಯಧ್ವಾರ, ವಸತಿಗೃಹ, ಉದ್ಯಾನವನ, ಸಭಾಂಗಣ ಸಹಿತ ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ.
ಡಿ. 2ರಂದು ಗುರುವಾರ ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾ ಭವನದಲ್ಲಿ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸುವರು.
ಇದನ್ನೂ ಓದಿ:ದಯವಿಟ್ಟು ಥಿಯೇಟರ್ ಒಳಗೆ ಪಟಾಕಿ ಹೊಡೆಯಬೇಡಿ : ಅಭಿಮಾನಿಗಳಲ್ಲಿ ಸಲ್ಮಾನ್ ಮನವಿ
ನ. 29ರಿಂದ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿಮಾರುಕಟ್ಟೆ ಉತ್ಸವ, ಗೌರಿಮಾರುಕಟ್ಟೆ ಉತ್ಸವ, ಲಕ್ಷ ದೀಪೋತ್ಸವ, ಡಿ. 4ರಂದು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೊಂದಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಸಮಾಪನಗೊಳ್ಳಲಿವೆ.
ಪ್ರತಿದಿನ ಅಮೃತವರ್ಷಿಣಿ ಸಭಾ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.