Advertisement

ಲಂಕಾ ತಂಡಕ್ಕೆ ಲಕ್ಮಲ್‌ ನಾಯಕ

06:10 AM Jun 24, 2018 | |

ಕೊಲಂಬೊ: ಶ್ರೀಲಂಕಾದ ಟೆಸ್ಟ್‌ ಕ್ರಿಕೆಟ್‌ ತಂಡದ ಹಂಗಾಮಿ ನಾಯಕರನ್ನಾಗಿ ವೇಗದ ಬೌಲರ್‌ ಸುರಂಗಾ ಲಕ್ಮಲ್‌ ಅವರನ್ನು ನೇಮಿಸಲಾಗಿದೆ. 

Advertisement

ವೆಸ್ಟ್‌ ಇಂಡೀಸ್‌ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಿದ ಆರೋಪಕ್ಕೆ ಗುರಿಯಾದ ಹಾಲಿ ನಾಯಕ ದಿನೇಶ್‌ ಚಂಡೀಮಲ್‌ ಅವರಿಗೆ ಒಂದು ಟೆಸ್ಟ್‌ ಪಂದ್ಯದ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ಲಕ್ಮಲ್‌ ಅವರನ್ನು ನೇಮಿಸಲಾಗಿದ್ದು, ಶನಿವಾರದಿಂದ ಆರಂಭಗೊಳ್ಳಲಿರುವ ವಿಂಡೀಸ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next