Advertisement
ಬೆಳ್ಮಣ್‌ನ ಜಯ ಶೆಟ್ಟಿ ಅವರ ಮಗ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದು ಯುನಿಯನ್ ಬ್ಯಾಂಕ್‌ನ ಕಾರ್ಕಳ ಶಾಖೆಯಲ್ಲಿ ಎರಡು ಖಾತೆ ಹೊಂದಿದ್ದರು. ಅವರ ಎರಡೂ ಖಾತೆಗಳಲ್ಲಿ ಪೇಟಿಎಂ ಆನ್‌ಲೈನ್ ಪೇಮೆಂಟ್ ಸಿಸ್ಟಂ ಹೊಂದಿದ್ದು ಫೆ. 10ರಿಂದ 20ರ ನಡುವೆ ಜಯಶೆಟ್ಟಿ ಅವರ ಮಗನ ಗಮನಕ್ಕೆ ಬಾರದೇ ಅಪರಿಚಿತರು ಆನ್‌ಲೈನ್ ಮೂಲಕ ಎರಡೂ ಖಾತೆಗಳಿಂದ ಹಂತ ಹಂತವಾಗಿ 1,56,100 ರೂ. ವರ್ಗಾಯಿಸಿಕೊಂಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಕರಂಬಳ್ಳಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಿಟ್ಟೂರಿನ ದೇಶ್ರಾಜ್ (19), ಪಿತ್ರೋಡಿಯ ನಾಗರಾಜ್ (21) ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫೋರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.