Advertisement

Dharwad: ಅಧಿಕಾರಿ ಪುತ್ರನ ಮದುವೆಯಲ್ಲಿ ಲಕ್ಷಾಂತರ ಹಣ, ವಜ್ರಗಳ ಕಳ್ಳತನ

08:32 AM Mar 07, 2024 | Team Udayavani |

ಧಾರವಾಡ: ಸರ್ಕಾರಿ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ಮದುವೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನ, ನಗದು ಹಣವನ್ನು ಕಳ್ಳರು ದೋಚಿಕೊಂಡು ಹೋಗಿರುವ ಘಟನೆ ನಡೆದಿದೆ.

Advertisement

ಧಾರವಾಡದ ಸರ್ಕಾರಿ ಇಲಾಖೆ ಅಧಿಕಾರಿಯೊಬ್ಬರ ಪುತ್ರನ ಮದುವೆ ಹುಬ್ಬಳ್ಳಿಯ ವಧುವಿನೊಂದಿಗೆ ಧಾರವಾಡದಲ್ಲಿ ನಡೆಯುತ್ತಿತ್ತು. ಈ ಮದುವೆಯ ಕಾರ್ಯಕ್ರಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಅಂದಾಜು 800 ಗ್ರಾಂ ಚಿನ್ನ, ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ ಹಾಗೂ ಸುಮಾರು 50 ಲಕ್ಷ ರೂಪಾಯಿ ನಗದನ್ನು ಖದೀಮರು ದೋಚಿದ್ದಾರೆ. ಕಳ್ಳನೊಬ್ಬ ತನ್ನ ಬ್ಯಾಗಿನಲ್ಲಿ ಎಲ್ಲವನ್ನೂ ಹಾಕಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣದ ಕುರಿತು ವಿಷಯ ಸಂಗ್ರಹಿಸುತ್ತಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next