Advertisement
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಪ್ರಕರಣದಲ್ಲಿ ನಾಲ್ವರು ರೈತರಾದ ಗುರುವಿಂದರ್ ಸಿಂಗ್, ಕಮಲ್ಜೀತ್ ಸಿಂಗ್, ಗುರುಪ್ರೀತ್ ಸಿಂಗ್ ಮತ್ತು ವಿಚಿತ್ರಾ ಸಿಂಗ್ ಅವರಿಗೂ ಜಾಮೀನು ನೀಡಿ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತು.
ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಹಿಂಸಾಚಾರ ಭುಗಿಲೆದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಜನವರಿ 25 ರಂದು ಆಶಿಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆ ಮಿಶ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ದೇವ್, ಆರೋಪಿಯ ತಂದೆ ಈಗ ಸಂಸದ ಅಥವಾ ಸಚಿವರಲ್ಲ.ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಹಾಗಾಗಿ ಎಷ್ಟು ಪ್ರಭಾವಿ ಎಂಬುದಕ್ಕೆ ಸೃಷ್ಟಿಯಾದ ಸಂಪೂರ್ಣ ವಿವಾದ ದೂರವಾಗಿದೆ ಎಂದು ದೇವ್ ಹೇಳಿದ್ದಾರೆ.
Related Articles
Advertisement