ನವದೆಹಲಿ: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಸೋಮವಾರ(ಜನವರಿ 03) 5,000 ಪುಟಗಳ ಆರೋಪಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಗೃಹಖಾತೆ ಸಚಿವ ಅಜಯ್ ಮಿಶ್ರಾ ಥೇಣಿ ಪುತ್ರ ಅಶೀಶ್ ಮಿಶ್ರಾನನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇಂದಿನಿಂದ ಜೋಹಾನ್ಸ್ ಬರ್ಗ್ ಟೆಸ್ಟ್: ವಿರಾಟ್ ಪಂದ್ಯದಿಂದ ಔಟ್, ರಾಹುಲ್ ನೂತನ ನಾಯಕ
ರೈತರ ಪ್ರತಿಭಟನೆ ಸಂದರ್ಭದಲ್ಲಿನ ಹಿಂಸಾಚಾರದ ನಂತರ ಎಂಟು ಮಂದಿ ಸಾವನ್ನಪ್ಪಿದ್ದರು. ಉತ್ತರಪ್ರದೇಶದ ಲಖೀಂಪುರ್ ಖೇರಿಗೆ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿ ನೀಡುವ ಮುನ್ನ ಈ ಹಿಂಸಾಚಾರ ನಡೆದಿತ್ತು ಎಂದು ಆರೋಪಿಸಲಾಗಿದೆ.
ಉತ್ತರಪ್ರದೇಶ ಸಚಿವರನ್ನು ಸ್ವಾಗತಿಸಲು ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರ ಬೆಂಗಾವಲು ಪಡೆ ಕಾರು ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ನಂತರ ಹಿಂಸಾಚಾರದಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದರು. ಲಖೀಂಪುರ್ ಖೇರಿ ಹಿಂಸಾಚಾರದ ಕುರಿತು ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ ಪ್ರಕಾರ, ಪ್ರತಿಭಟನಾ ನಿರತ ರೈತರನ್ನು ಕೊಲ್ಲುವ ವ್ಯವಸ್ಥಿತ ಸಂಚು ಇದಾಗಿತ್ತು ಎಂದು ತಿಳಿಸಿದೆ.
ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಶೀಶ್ ಮಿಶ್ರಾ ಸ್ಥಳದಲ್ಲಿ ಇದ್ದಿರುವುದಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳು ಹೇಳಿವೆ. ಅಷ್ಟೇ ಅಲ್ಲದೇ ಆರೋಪಪಟ್ಟಿಯಲ್ಲಿ ಅಶೀಶ್ ಮಿಶ್ರಾನ ಸಂಬಂಧಿಯ ಹೆಸರನ್ನೂ ಕೂಡಾ ದಾಖಲಿಸಿರುವುದಾಗಿ ವರದಿ ವಿವರಿಸಿದೆ.