Advertisement
ಗ್ರಾ.ಪಂ. ಅಥವಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುವ ಎಲ್ಲ ಕೆರೆಗಳಿಗೂ ಸ್ಥಳೀಯರನ್ನು ಒಳಗೊಂಡ ನಿರ್ವಹಣ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಕೆರೆಗಳ ಅಭಿವೃದ್ಧಿಯ ಸಂದರ್ಭ ಮಾತ್ರ ಈ ಸಮಿತಿ ಕ್ರಿಯಾಶೀಲವಾಗಿರುತ್ತವೆ. ಅಭಿವೃದ್ಧಿ ಕಾರ್ಯ ಪೂರ್ಣವಾಗುತ್ತಿದ್ದಂತೆ ಸಮಿತಿಗಳು ಹೇಳಹೆಸರಿಲ್ಲದಂತೆ ದೂರಾಗುತ್ತವೆ. ಕೆಲವು ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ಅಂತಹ ಸಂದರ್ಭದಲ್ಲಿ ಗುತ್ತಿಗೆ ಪಡೆದವರು ನಿರ್ವಹಣೆ ಮಾಡುತ್ತಾರೆ. ಮೀನು ಮರಿ ಬಿಟ್ಟು, ಮೀನು ಕೃಷಿ ಮುಗಿದ ಅನಂತರದಲ್ಲಿ ಕೆರೆ ನಿರ್ವಹಣೆಯಿಲ್ಲದೆ ಅನಾಥವಾಗುತ್ತಿವೆ.
Related Articles
ಕೆರೆಗಳ ಅಭಿವೃದ್ಧಿಗೆ ನರೇಗಾದಡಿ ಹೆಚ್ಚಿನ ಅವಕಾಶ ವಿದೆ. ಗ್ರಾ.ಪಂ. ಪಿಡಿಒ, ಅಧ್ಯಕ್ಷ ಹಾಗೂ ಸದಸ್ಯರ ಸಮನ್ವಯದೊಂದಿಗೆ ಕಾರ್ಯ ನಡೆಸಿದಾಗ ನರೇಗಾ ದಡಿ ಕೆರೆಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಿಸಲು ಸಾಧ್ಯವಿದೆ. ಆದರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಇದು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಹೊಂದಿದ ಕೆರೆಗಳಲ್ಲಿ ಪ್ರತೀ ವರ್ಷ ಹೂಳೆತ್ತಬೇಕಾಗುತ್ತದೆ.
Advertisement
ಒಂದು ವರ್ಷ ಹೂಳೆತ್ತದಿದ್ದರೆ ಕೆರೆಯ ಸ್ಥಿತಿ ಬೇರೆಯಾಗಿರುತ್ತದೆ. ನರೇಗಾದಡಿ ಹೂಳೆತ್ತಲು ಅವಕಾಶವಿದೆ. ಆದರೆ ಯಂತ್ರೋಪಕರಣ ಬಳಸುವಂತಿಲ್ಲ. ಸಂಪೂರ್ಣ ಮಾನವ ಶ್ರಮದಿಂದಲೇ ಆಗಬೇಕು. ಹೂಳೆತ್ತುವ ಕಾರ್ಯಕ್ಕೂ ಯಾರೂ ಮುಂದಾಗದೆ ಇರುವುದರಿಂದ ಬಹುತೇಕ ಗ್ರಾ.ಪಂ.ಗಳು ಇದರ ಗೋಜಿಗೆ ಹೋಗುವುದಿಲ್ಲ.
ಯಾವುದೇ ಇಲಾಖೆಯ ಅನುದಾನದಲ್ಲಿ ಕೆರೆಯ ಅಭಿವೃದ್ಧಿಯಾದರೂ ಅದರ ನಿರ್ವಹಣೆಯನ್ನು ಸ್ಥಳೀಯಾಡಳಿತವೇ ಮಾಡಬೇಕಾಗುತ್ತದೆ.
ಸಣ್ಣ ನೀರಾವರಿ ಇಲಾಖೆ ಬೃಹತ್ ಕೆರೆಗಳು
– ಮಂಗಳೂರು ಕಾವೂರಿನ “ಕಾವೂರು ಕೆರೆ’
– ಬಂಟ್ವಾಳದ ಕಾರಿಂಜೇಶ್ವರ ಕೆರೆ
– ಕಾರ್ಕಳದ ಆನೆಕೆರೆ
– ಕಾಪು ಎಲ್ಲೂರಿನ ದಳಂತ್ರ ಕೆರೆ
– ಬ್ರಹ್ಮಾವರ ಚಾಂತಾರಿನ ಮದಗ
– ಕುಂದಾಪುರ ತಾಲೂಕಿನ ಕಂಏರಿಕೆರೆ ಕೆರೆಗಳ ಅಭಿವೃದ್ಧಿಗೆ ನರೇಗಾದಲ್ಲಿ ಮುಕ್ತ ಅವಕಾಶವಿದೆ. ಅದರಲ್ಲೂ ಹೂಳೆತ್ತಲು ಬೇಕಾದ ಕಾರ್ಯಯೋಜನೆಯನ್ನು ಸಿದ್ಧಪಡಿಸಿಕೊಳ್ಳಬಹುದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತ್ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ 75 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರ ನಿರ್ವಹಣೆಯನ್ನು ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಗಳೇ ಮಾಡಬೇಕಾಗುತ್ತದೆ.
– ಪ್ರಸನ್ನ ಎಚ್., ಡಾ| ಕುಮಾರ್, ಜಿ.ಪಂ. ಸಿಇಒ ಉಡುಪಿ ಮತ್ತು ದ.ಕ.