Advertisement
ಸಾರ್ವಜನಿಕರು ಹಾದು ಹೋಗುವ ದಾರಿಯಲ್ಲಿ ತೆರೆದ ಕೆರೆಗಳಿದ್ದರೆ, ಅವುಗಳಿಗೆ ತಡೆಗೋಡೆ ಅಥವಾ ತಡೆ ಬೇಲಿ ನಿರ್ಮಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯಾಡಳಿತಗಳು ಮಾಡಬೇಕಿದೆ.
ಕೆಲವೆಡೆ ರಸ್ತೆ ಬದಿಗಳಲ್ಲಿ ಕೆರೆ ಅಥವಾ ನೀರು ಸಂಗ್ರಹಣ ತೊಟ್ಟಿಗಳಿರುವ ಜಾಗದಲ್ಲಿ ಎಚ್ಚರಿಕೆ ಫಲಕ ಅಳವಡಿಸಿ, ಸಾರ್ವಜನಿಕರಿಗೆ ಸೂಚನೆ ನೀಡುವ ಕಾರ್ಯವನ್ನೂ ಮಾಡಬಹುದು. ಸಿದ್ದಮೂಲೆಯಲ್ಲಿದೆ ರಸ್ತೆ ಬದಿ ಕೆರೆ
ನೆಟ್ಟಾರು-ಪೆರ್ಲಂಪಾಡಿ ರಸ್ತೆಯ ಬದಿಯಲ್ಲಿ ಸಿದ್ದಮೂಲೆ ಎಂಬಲ್ಲಿ ಎರಡು ಕೆರೆಗಳಿದ್ದು, ಅವುಗಳಲ್ಲಿ ವರ್ಷಪೂರ್ತಿ ನೀರು ತುಂಬಿಕೊಂಡಿರುತ್ತದೆ. ಈ ಕೆರೆಗಳು ಮುಖ್ಯ ರಸ್ತೆಯ ಬದಿಯಲ್ಲೇ ಇವೆ. ಇಲ್ಲೇ ಸಮೀಪದಲ್ಲಿ ಪ್ರೌಢಶಾಲೆಯೂ ಇದ್ದು ವಿದ್ಯಾರ್ಥಿಗಳು, ಸಾರ್ವಜನಿಕರೂ ಈ ರಸ್ತೆಯಲ್ಲೇ ಸಾಗುತ್ತಿದ್ದಾರೆ. ಜತೆಗೆ ಹೆಚ್ಚಿನ ವಾಹನಗಳೂ ಇದೇ ರಸ್ತೆಯಲ್ಲಿ ಸಾಗುತ್ತಿದೆ. ಹೀಗಾಗಿ, ತಡೆ ಬೇಲಿ ನಿರ್ಮಿಸುವುದು ಅಗತ್ಯವಾಗಿದೆ. ಇದೇ ರೀತಿ ತೆರೆದ ಬಾವಿ, ಕೆರೆಗಳತ್ತಲೂ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Related Articles
ಕೆಲ ದಿನಗಳ ಹಿಂದೆ ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಮೀಪದ ಮೂಲೆತ್ತಡ್ಕದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುವ ಇಬ್ಬರು ಬಾಲಕಿಯರು ತೆರೆದ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದು, ಇಂತಹ ಘಟನೆಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ರಸ್ತೆಯ ಬದಿಗಳಲ್ಲಿರುವ ಕೆರೆಗಳಿಗೆ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
ಎಚ್ಚರಿಕೆ ಅಗತ್ಯತೆರೆದ ಬಾವಿ, ಕೆರೆಗಳು ಸಹಿತ ಅಪಾಯಕಾರಿ ಸ್ಥಳಗಳಿಗೆ ಮಕ್ಕಳು ಹಿರಿಯರು ಜತೆಗಿಲ್ಲದೆ ಹೋಗಬಾರದು. ಸಾಹಸ ಪ್ರವೃತಿ ಜೀವಕ್ಕೆ ಎರವಾಗುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರೂ ಈ ಕುರಿತು ಎಚ್ಚರಿಕೆ ವಹಿಸುವು ಅತ್ಯಗತ್ಯ.
– ಡಿ.ಎನ್. ಈರಯ್ಯ, ಉಪನಿರೀಕ್ಷಕ
ಬೆಳ್ಳಾರೆ ಪೊಲೀಸ್ ಠಾಣೆ ಪ್ರವೀಣ್ ಚೆನ್ನಾವರ